ಜಾಗೋ ಭಾರತ್-ಭಾಗ 2

Author : ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)

Pages 190

₹ 110.00




Year of Publication: 2015
Published by: ವಿಕ್ರಂ ಪ್ರಕಾಶನ
Address: ನಂ.240, 5ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕಾಫಿಬೋರ್ಡ್ ಲೇಔಟ್ ಕೆಂಪಾಪುರ, ಹೆಬ್ಬಾಳ, ಬೆಂಗಳೂರು- 560024

Synopsys

`ಜಾಗೋ ಭಾರತ್-ಭಾಗ 2' ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು ಬರೆದ ಅಂಕಣ ಬರಹಗಳ ಸಂಕಲನ. ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‍ನಲ್ಲಿ ಫಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ.. ಹೀಗೆ ಇಲ್ಲಿನ ಅಂಕಣ ಬರಹಗಳು ಸಾಗುತ್ತದೆ. ಬರಹಗಳು ವೈವಿಧ್ಯಮಯ, ಮಾಹಿತಿಭರಿತ, ಧ್ವನಿಪೂರ್ಣ. ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಸಮಸ್ಯೆಗಳು ಇತ್ಯಾದಿ ವಿಶ್ಲೇಷಣೆ ಬರಹಗಳಲ್ಲಿದೆ. 

About the Author

ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)
(09 April 1980)

ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು.  ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ...

READ MORE

Related Books