About the Author

ಲೇಖಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ದವಡ ಬೆಟ್ಟಗ್ರಾಮದವರು. ದವಡಬೆಟ್ಟ, ಮಧುಗಿರಿ, ಚನ್ನಪಟ್ಟಣ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, 1996-97 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವೀಧರರು. 2001ರಲ್ಲಿ ಡಾ.ಜಿ.ಆರ್. ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ  ‘ನಿಡುಗಲ್ಲು:ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಡಾಕ್ಟರೇಟ್ ಪದವೀಧರರು.

ಚಿತ್ತಯ್ಯ ಅವರು ಶಾಸ್ತ್ರೀಯ ಭಾಷೆಯಲ್ಲಿಅಧ್ಯಯನ ನಡೆಸಿದ್ದು, ಸೃಜನಶೀಲ ಮತ್ತು ಸಂಶೋಧನಾ ಬರಹಗಳಾಗಿ 29 ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಅಕ್ಷರ ಮಂದಿರದ ಅಪೇಕ್ಷೆಯಂತೆ ಮಕ್ಕಳಿಗೆ ಮೀಸಲಾದ 50 ಪುಸ್ತಕಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ.

ಇವರಿಗೆ 2017ನೇ ಸಾಲಿನ ರಾಜ್ಯಮಟ್ಟದ ‘ಶ್ರೀವಿಜಯಾ ಸಾಹಿತ್ಯ ಪ್ರಶಸ್ತಿ’, ‘ಬಿ.ಎಸ್. ಸಣ್ಣಯ್ಯ ದತ್ತಿ ಪ್ರಶಸ್ತಿ’, ‘ಸಾಹಿತ್ಯ ಶ್ರೀ’ ಪ್ರಶಸ್ತಿಗಳು ಸಂದಿವೆ. ಸಂಚಲನ ಸಂಸ್ಕೃತಿ ವೇದಿಕೆ ಮತ್ತು ಜ್ಞಾನಸಿರಿ ಕಲ್ಚರಲ್ ಅಕಾಡೆಮಿ ವೇದಿಕೆ ಮೂಲಕ ಕಾರ್ಯಕ್ರಮ, ವಿಚಾರಸಂಕಿರಣಗಳನ್ನು ಆಯೋಜಿಸಿದ್ದಾರೆ.  ಬೆಂಗಳೂರು ನಗರ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಸಂಶೋಧಕರ ಒಕ್ಕೂಟದ ಸಂಚಾಲಕರಾಗಿ, ಬೆಂ.ವಿ.ವಿ ನಿವಾಸಿಗಳ ಸಂಘದ ಉಪಾಧ್ಯಕ್ಷರಾಗಿ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನ ವಿಭಾಗದ ಮೇಲ್ವಿಚಾರಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.

ಡಿ.ಕೆ. ಚಿತ್ತಯ್ಯ ಪೂಜಾರ್