About the Author

ಲೇಖಕ ಗಂಗಾರಾಂ ಚಂಡಾಳ ಅವರು ಕೋಲಾರ ಜಿಲ್ಲೆಯ ಯಡಹಳ್ಳಿ (ಜನನ: 18-06-1961) ಗ್ರಾಮದವರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ.  ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ಯು.ಆರ್.ಪಿ ವತಿಯಿಂದ (2005) ಎಂ.ಟೆಕ್ ವ್ಯಾಸಂಗ ಪೂರೈಸಿದರು. ಕನ್ನಡ, ತೆಲುಗು, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರು. 

ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ ಸಂಘಟನೆಯಿಂದ ಸಮಾಜ ಸೇವೆಯಲ್ಲಿ ನಿರತರು. ಗೋಕಾಕ್ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ., ಸಮ್ಮೇಳನ, ಉತ್ಸವಗಳು ಹೀಗೆ ವಿವಿಧೆಡೆ ಕವಿಗೋಷ್ಠಿಗಳಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. 

ಕೃತಿಗಳು: ಚಂಡಾಳರ ಕೂಗು, ಟೀಚರ್ಸ ಲರ್ನಿಂಗ್ ಸ್ಕಿಲ್, ಧರ್ಮದ ಹಕ್ಕಿ, ಜೀವಸೆಲೆ (ಕವನ ಸಂಕಲನಗಳು), ವಿವಾಹ ಒಂದು ಅಧ್ಯಯನ, ಕರ್ನಾಟಕ ದಲಿತ ಚಳವಳಿ ಮತ್ತು ಡಾ.ಅಂಬೇಡ್ಕರ್ (ವೈಚಾರಿಕ ಕೃತಿಗಳು), ಬೆವರ ಬಸಿರ ಬೆಂಕಿ (ದೀರ್ಘ ಕಾವ್ಯ), ಕೋಪರ್ನಿಕಸ್ (ವ್ಯಕ್ತಿ ಚಿತ್ರಣ), ಮೀಸಲಾತಿ: ಒಂದು ಪ್ರಶ್ನೆ-ಒಂದು ವಿಶ್ಲೇಷಣೆ (ಸಂಪಾದನೆ). ಮೀಸಲಾತಿ: ಒಂದು ಪ್ರಶ್ನೆ-ಒಂದು ವಿಶ್ಲೇಷಣೆ (ಆಕರ ಗ್ರಂಥ) 

ಪ್ರಶಸ್ತಿ-ಗೌರವಗಳು: ಜೀವಸೆಲೆ ಕವನ ಸಂಕಲಕ್ಕೆ ಪ್ರಥಮ ಬಹುಮಾನ-ಕೋಲಾರ ಕನ್ನಡ ಸಾಹಿತ್ಯ ಪರಿಷತ್‍ ನ ಜಿಲ್ಲಾ ಕಾವ್ಯ ಸ್ಪರ್ಧೆಯಲ್ಲಿ, ಬೆಂಗಳೂರಿನ ರಂಗಚೇತನ ಕಲಾವಿದರು ಮತ್ತು ಸಾಹಿತ್ಯ ಚಟುವಟಿಕೆಗಳಿಗಾಗಿ ನಾಡಚೇತನ ಬಿರುದು. ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಡಾ.ಅಂಬೇಡ್ಕರ್ ಫೆಲೋಶಿಫ್ ರಾಷ್ಟ್ರೀಯ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

ಗಂಗಾರಾಂ ಚಂಡಾಳ