ಮಹಿಳಾ

Author : ಗಂಗಾರಾಂ ಚಂಡಾಳ

Pages 224

₹ 180.00




Year of Publication: 2017
Published by: ಮಣಿ ಪ್ರಕಾಶನ
Address: # 2, 2ನೇ ಅಡ್ಡರಸ್ತೆ, 3ನೇ ಮಹಡಿ, ಕೋಣೆ ಸಂಖ್ಯೆ 1, ಮುನೇಶ್ವರ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು-560003.

Synopsys

ಲೇಖಕ ಗಂಗಾರಾಂ ಚಾಂಡಾಳ ಅವರ ಕೃತಿ-ಮಹಿಳಾ. ಸ್ತ್ರೀವಾದಿ ನೆಲೆಯಲ್ಲಿ ಪ್ರತಿಪಾದಿಸಿದ ಲೇಖನಗಳ ಸಂಗ್ರಹ ಕೃತಿ ಇದು. ಒಂದೆಡೆ ಮಹಿಳೆಯರ ಕಾನೂನಿನ ಬೆಂಬಲ ಕುರಿತು ಮಹಿಳೆಯರಿಗೆ ತಿಳಿದಿಲ್ಲ. ಮತ್ತೊಂದೆಡೆ-ಹೆಣ್ಣು-ಹೆಣ್ಣನ್ನೇ ಶೋಷಿಸುವ ವ್ಯವಸ್ಥೆ ಇದೆ. ಮಗದೊಂದು ಕಡೆ-ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳುತ್ತಾ ಪುರುಷರನ್ನು ಮುಲೆಗುಂಪಾಗಿಸಬಾರದು ಎಂಬ ಪುರುಷ ಪ್ರಧಾನ ಮನೋಭಾವ. ಇನ್ನೊಂದು ಕಡೆ-ಹೆಣ್ಣೆ ಹೆಣ್ಣಾಗಿಯೇ ಇರಬೇಕು ಎಂಬ ಮಹಿಳಾ ಸಮೂಹದಲ್ಲೇ ಅಪಸ್ವರ ಇಂತಹ ಗೊಂದಲದಿಂದಾಗಿ ಮಹಿಳೆಯರಲ್ಲಿ ಐಕ್ಯತೆ ಬರುತ್ತಿಲ್ಲ. ಇದರ ಲಾಭ ಪುರುಷ ಪ್ರಧಾನ ಸಮಾಜ ತೆಗೆದುಕೊಳ್ಳುತ್ತಿದೆ. ಆದ್ದರಿಂದ, ಮಹಿಳೆಯರು ಎಲ್ಲಿಯವರೆಗೆ ತಮ್ಮ ಹಕ್ಕುಗಳು ಕೇಳುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರ ಮೇಲೆ ಶೋಷಣೆ ಆಗುತ್ತಿರುತ್ತದೆ ಎಂಬ ಎಚ್ಚರ ನೀಡುವ ಬರಹಗಳು ಇಲ್ಲಿ ಸಂಕಲನಗೊಂಡಿವೆ.

About the Author

ಗಂಗಾರಾಂ ಚಂಡಾಳ

ಲೇಖಕ ಗಂಗಾರಾಂ ಚಂಡಾಳ ಅವರು ಕೋಲಾರ ಜಿಲ್ಲೆಯ ಯಡಹಳ್ಳಿ (ಜನನ: 18-06-1961) ಗ್ರಾಮದವರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ.  ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ಯು.ಆರ್.ಪಿ ವತಿಯಿಂದ (2005) ಎಂ.ಟೆಕ್ ವ್ಯಾಸಂಗ ಪೂರೈಸಿದರು. ಕನ್ನಡ, ತೆಲುಗು, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರು.  ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ ಸಂಘಟನೆಯಿಂದ ಸಮಾಜ ಸೇವೆಯಲ್ಲಿ ನಿರತರು. ಗೋಕಾಕ್ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ., ಸಮ್ಮೇಳನ, ಉತ್ಸವಗಳು ...

READ MORE

Related Books