About the Author

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. ತುಮಕೂರು ಜಿಲ್ಲೆಯ ತಲಪುರ ಮೂಲದವರಾದ ಬೋರಲಿಂಗಯ್ಯ ಅವರ ತಂದೆ ಚಿಕ್ಕೇಗೌಡ ಮತ್ತು ತಾಯಿ ಕಾಳಮ್ಮ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ, ನಾಟಕ ಅಕಾಡೆಮಿ ರಿಜಿಸ್ಟಾರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಪ್ರತಿನಿಧಿಯಾಗಿ ಫ್ರಾನ್ಸ್‌, ಇಟಲಿ, ಹಾಲೆಂಡ್, ಸೌದಿ, ದುಬಾಯ್, ಇರಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ಸಂಸ್ಕೃತಿ, ಮಂಟೆಸ್ವಾಮಿ ಕಾವ್ಯ, ಕರ್ನಾಟಕ ಜಾನಪದ (ಸಂಪಾದನೆ) ಅವರ ಪ್ರಕಟಿತ ಕೃತಿಗಳು.

ಹಿ.ಚಿ. ಬೋರಲಿಂಗಯ್ಯ

(25 Oct 1955)