ಕುಪ್ಪಳ್ಳಿ ಡೈರಿ

Author : ಹಿ.ಚಿ. ಬೋರಲಿಂಗಯ್ಯ

Pages 192

₹ 200.00
Year of Publication: 2020
Published by: ಬಹುರೂಪಿ
Address: ಎಂಬೆಸಿ ಸೆಂಟರ್, 111, ಮೊದಲನೇ ಮಹಡಿ, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಈಸ್ಟ್, ಬೆಂಗಳೂರು- 560001
Phone: 7019182729

Synopsys

‘ಕುಪ್ಪಳ್ಳಿ ಡೈರಿ’ ಜಾನಪದ ವಿದ್ವಾಂಸ, ಲೇಖಕ ಹಿ.ಚಿ. ಬೋರಲಿಂಗಯ್ಯ ಅವರ ಕಾದಂಬರಿ. ಈ ಕೃತಿಗೆ ಲೇಖಕ ಜಿ.ಎನ್. ಮೋಹನ್ ಬೆನ್ನುಡಿ ಬರೆದಿದ್ದಾರೆ. ‘ಹೋಗುವೆನು ನಾ ಹೋಗುವೆ ನಾ' ಎಂದು ಕುವೆಂಪು ಅವರು ಹಂಬಲಿಸಿದ ಆ ಕುಪ್ಪಳ್ಳಿಯಲ್ಲಿ ಹಿ.ಚಿ.ಬೋರಲಿಂಗಯ್ಯ ಅವರು ಕನ್ನಡ ವಿಶ್ವವಿದ್ಯಾಲಯದ ಹಿರಿಮೆಯನ್ನು ಹರಡಿದವರು. ಕುಪ್ಪಳ್ಳಿಯಲ್ಲಿ ವಿಶ್ವವಿದ್ಯಾಲಯದ ಬೇಲಿಯೊಳಗೆ ಉಳಿಯದೆ ಇವರು ಅಲ್ಲಿಯೇ ಮಳೆಯನ್ನೂ, ಕಾಡನ್ನೂ, ಅದರ ವಾಸನೆಯನ್ನೂ, ಆರ್ಭಟವನ್ನೂ ಇನ್ನಿಲ್ಲದಂತೆ ಅನುಭವಿಸಿದ್ದಾರೆ. ಹೊಳೆಯಲ್ಲಿ ಇಳಿದು ಮೀನನ್ನು ಹಿಡಿದಿದ್ದಾರೆ. ಕಾಡು ಹೊಕ್ಕು ಅಣಬೆ ಎಣಿಸಿದ್ದಾರೆ. ಹಕ್ಕಿಗಳ ಬೆನ್ನು ಬಿದ್ದಿದ್ದಾರೆ. ಅಷ್ಟೇ ಅಲ್ಲ, ಅವರು ನಿಜ ಅರ್ಥದಲ್ಲಿ ಕುಪ್ಪಳ್ಳಿಯ ನಿಸರ್ಗದಲ್ಲಿ ತಮ್ಮನ್ನು ಕಳೆದುಕೊಂಡಿದ್ದಾರೆ. ಅವರ ದಿನನಿತ್ಯದ ಈ ಅನುಭವವೇ ಕುಪ್ಪಳ್ಳಿ ಡೈರಿಯಾಗಿದೆ '  ಎಂದು ಪ್ರಶಂಸಿಸಿದ್ದಾರೆ. 

About the Author

ಹಿ.ಚಿ. ಬೋರಲಿಂಗಯ್ಯ
(25 October 1955)

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. ತುಮಕೂರು ಜಿಲ್ಲೆಯ ತಲಪುರ ಮೂಲದವರಾದ ಬೋರಲಿಂಗಯ್ಯ ಅವರ ತಂದೆ ಚಿಕ್ಕೇಗೌಡ ಮತ್ತು ತಾಯಿ ಕಾಳಮ್ಮ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ, ನಾಟಕ ಅಕಾಡೆಮಿ ರಿಜಿಸ್ಟಾರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಪ್ರತಿನಿಧಿಯಾಗಿ ಫ್ರಾನ್ಸ್‌, ಇಟಲಿ, ಹಾಲೆಂಡ್, ಸೌದಿ, ದುಬಾಯ್, ಇರಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ...

READ MORE

Related Books