About the Author

ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. 

ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ಉದ್ದೇಪಿಸುವ ಶಿಬಿರಗಳ ಆಯೋಜನೆ, ಹಲವು ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ನಾಡಿನ ಅನೇಕ ಪತ್ರಿಕೆಗಳಲ್ಲಿ, ಸ್ಮರಣಸಂಚಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಸಂತ ತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯ ಜೀವನ ಕೃತಿಗಳನ್ನು ಪ್ರಕಟಿಸಿದ್ದಾರೆ. 

ಕನ್ನಡ ಪ್ರಭ ಮತ್ತು ಹೊಸದಿಗಂತ ಪತ್ರಿಕೆಗಳಲ್ಲಿ ಅಂಕಣಕಾರರೂ ಆಗಿದ್ದು.ಪ್ರಕೃತ ಜ್ಞಾನವಿಜ್ಞಾನ- ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಧರ್ಮಭಾರತೀ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಜಗದೀಶಶರ್ಮಾ ಸಂಪ