ಕಥೆ ಬೇಕೇನ್ರೀ ಕಥೆ?

Author : ಜಗದೀಶಶರ್ಮಾ ಸಂಪ

₹ 140.00




Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

"ಕಥೆ ಬೇಕೇನ್ರೀ ಕಥೆ?"ಇದು ಜಗದೀಶಶರ್ಮ ಬರೆದ ಒಂದು ರೀತಿಯ ಮಾಸ್ ಪುಸ್ತಕ. ಮಾಸ್‌ ಯಾಕೆಂದರೆ ಇದು ಎಲ್ಲ ವಯಸ್ಸಿನವರಿಗೆ ಅನ್ವಯವಾಗುವ ಪುಸ್ತಕ. ಮಕ್ಕಳು ಅದರ ಸರಳ ಭಾಷೆ ಮತ್ತು ಹೊಸ ನೀತಿಗೆ, ಅಪ್ಪ ಅಮ್ಮಂದಿರು ಮರೆತು ಹೋದ ನೀತಿ ಪಾಠಗಳನ್ನ ನವೀಕರಿಸಿಕೊಳ್ಳುವುದಕ್ಕೆ ಮತ್ತು ಅಜ್ಜ ಅಜ್ಜಿ ನಮ್ಮ ಕಾಲದ ಕಥೆಗಳು ಎಷ್ಟು ಸತ್ವಯುತವಾಗಿತ್ತು ಎಂದು ನೆನಪಿಸಿಕೊಳ್ಳುವುದಕ್ಕೆ ಈ ಪುಸ್ತಕ ಓದಬಹುದು. ಫಾಮಿಲಿ ಎಂಟರ್ಟೈನರ್ ನಿನೆಮಾತರ ಈ ಪುಸ್ತಕ ಮನೆಗೆ ತಂದಿಟ್ಟರೆ ಫ್ಯಾಮಿಲಿಯವರೆಲ್ಲ ಓದಬಹುದು. ಅವರವರ ಭಾವಕ್ಕೆ ತಕ್ಕಹಾಗೆ ಅರ್ಥ ಮಾಡಿಕೊಳ್ಳಬಹುದು.

About the Author

ಜಗದೀಶಶರ್ಮಾ ಸಂಪ

ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ.  ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...

READ MORE

Related Books