About the Author

ಜನಾರ್ದನರಾವ್ ಸಾಳಂಕೆ ಅವರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು. ಎಂ.ಎ (ಆರ್ಥಶಾಸ್ತ್ರ) ಹಾಗೂ ಎಂ.ಬಿ.ಎ (ಸಿಸ್ಟಮ್ಸ್) ಪದವೀಧರರು. ಬೆಂಗಳೂರಿನಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದಾರೆ. 

ಕೃತಿಗಳು: ಮರೆಯದ ಮಾಣಿಕ್ಯ (ಯಜಮಾನ ಡಾ.ವಿಷ್ಣುವರ್ಧನ್ ಅವರ ಚಿತ್ರಣ) ಸಿಂಹ ಘರ್ಜನೆ (ವಿಷ್ಣುವರ್ಧನ್ ತೀರಿಕೊಂಡ ಮೇಲೆ ನಡೆದ ಎರಡು ವರ್ಷಗಳ ಅವಧಿಯಲ್ಲಿಯ ಬೆಳವಣಿಗೆಗಳು), ಕರುಣಾಮಯಿ (ಡಾ.ವಿಷ್ಣುವರ್ಧನ್ ಅವರ ಕುಟುಂಬ, ಆಪ್ತರು, ಅಭಿಮಾನಿಗಳ ಸಂದರ್ಶನಗಳು), ನಾಗರಹಾವು (ವಿಷ್ಣುವರ್ಧನ್ ಅವರ ಪಾತ್ರದ ವಿಶ್ಲೇಷಣೆ) ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ ಯಶೋಗಾಥೆ. 

ಪ್ರಶಸ್ತಿ-ಪುರಸ್ಕಾರಗಳು: ಡಾ.ವಿಷ್ಣುವರ್ಧನ್ ಅವರ ಮೇಲಿನ ನಾಲ್ಕೂ ಪುಸ್ತಕಗಳಿಗೆ ಬೆಂಗಳೂರಿನ ವೆಂಕಟಾಪುರದ ಡಾ.ವಿಷ್ಣು ಸೇನಾ ಸಮಿತಿ,  ಸನ್ ಸ್ಟಾರ್ ನಾಗರಹಾವು ಡಾ.ವಿಷ್ಣುವರ್ಧನ್ ಕ್ರೀಡಾ ಮತ್ತು ಸಾಂಸ್ಕೃತಕ ಟ್ರಸ್ಟ್ , ಕಮಲಾನಗರ. ಬಿನ್ನಿಪೇಟೆಯ ಸಾಮ್ರಾಟ್ ಟೀo, ಲಗ್ಗೆರೆ ಚೌಡೇಶ್ವರಿನಗರದ ಯಜಮಾನ ಡಾ.ವಿಷ್ಣುವರ್ಧನ ಅಭಿಮಾನಿಗಳ ಸಂಘ,, ಇಂದಿರಾನಗರದ  ಹೃದಯವಂತ ಡಾ.ವಿಷ್ಣುವರ್ಧನ ಅಭಿಮಾನಿಗಳ ಸಂಘ, ಡಬಲ್ ರೋಡ್ ನ  ಡಾ.ವಿಷ್ಣು ಸೇವಾ ಸಮಿತಿ, ರಾಜಾಜಿನಗರದ ಡಾ.ವಿಷ್ಣುವರ್ಧನ ಸೇನಾ ಸಮಿತಿ, ನೆಲಮಂಗಲದ ಡಾ.ವಿಷ್ಣುವರ್ಧನ್ ಸೇನಾ ಸಮಿತಿ, ಆನೇಕಲ್ ನ ಡಾ.ವಿಷ್ಣುವರ್ಧನ್  ಅಭಿಮಾನಿಗಳ ಸಂಘ, ಮಲ್ಲೇಶ್ವರಂನ ಡಾ.ವಿಷ್ಣುವರ್ಧನ್  ಅಭಿಮಾನಿಗಳ ಸಂಘ, ಲಗ್ಗೆರೆಯ ಕೋಟಿಗೊಬ್ಬ ಡಾ.ವಿಷ್ಣುವರ್ಧನ್  ಅಭಿಮಾನಿಗಳ ಸಂಘ-ಈ ಎಲ್ಲ ಸಂಘಗಳಿಂದ ಪುರಸ್ಕಾರಗಳು ಲಭಿಸಿವೆ.

ಜನಾರ್ದನರಾವ್ ಸಾಳಂಕೆ

(29 Sep 1971)