ನಾಗರಹಾವು

Author : ಜನಾರ್ದನರಾವ್ ಸಾಳಂಕೆ

Pages 232

₹ 130.00




Year of Publication: 2012
Published by: ಅನ್ನಪೂರ್ಣ ಪಬ್ಲಿಷರ್‍ಸ್ ಆಂಡ್ ಡಿಸ್ಟ್ರಿಬ್ಯೂಟರ್‍ಸ್
Address: ಸುರೇಶ.ಬಿ.ಕೆ #176,12ನೇಕ್ರಾಸ್, ಮಾಗಡಿ ಮುಖ್ಯ ರಸ್ತೆ ಅಗ್ರಹಾರ ದಾಸರಹಳ್ಳಿ, ಬೆಂಗಳೂರು -79
Phone: 9880802551

Synopsys

ನಟ ಡಾ. ವಿಷ್ಣುವರ್ಧನ್ ಅವರ ಬದುಕಿನಲ್ಲಿ ಮಾತ್ರವಲ್ಲ; ಕನ್ನಡ ಚಲನಚಿತ್ರ ರಂಗದಲ್ಲಿ ನಾಗರಹಾವು ಸಿನಿಮಾ ಗುರುತರ ಹೆಜ್ಜೆ ಮೂಡಿಸಿದೆ. 29-12-1972ರಲ್ಲಿ ತೆರೆ ಕಂಡ ಈ ಸಿನಿಮಾ 29-12-2012ಕ್ಕೆ 40 ವರ್ಷಗಳು ಸಂದ ಪ್ರಯುಕ್ತ ಲೇಖಕ ಜನಾರ್ದನರಾವ್ ಸಾಳಂಕೆ ಅವರ ‘ನಾಗರಹಾವು’ ಕೃತಿ ಬಿಡುಗಡೆ ಕಂಡಿದೆ. ಕನ್ನಡ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾ ಒಂದು ಅಮರ ಪ್ರೇಮ ಕಾವ್ಯ ಎಂದೇ ಪರಿಗಣಿಸಲಾಗುತ್ತದೆ. ಕೃತಿಗೆ ಬೆನ್ನುಡಿ ಬರೆದ ಡಾ. ಸಿ.ಎಸ್. ಅಶ್ವತ್ಥ ‘ಜಗತ್ತಿನಲ್ಲಿ ತನಗೆ ಎಷ್ಟೇ ದುಃಖ ಆದ್ರೂ, ಏನೇ ಕಷ್ಟ ಬಂದ್ರೂ, ಇತರರ ಸುಖಕ್ಕೋಸ್ಕರವಾಗಿ ತನ್ನ ಭಾಳನ್ನ ತ್ಯಾಗ ಮಾಡೊವ್ನೆ ದೊಡ್ಡ ವ್ಯಕ್ತಿ. ಮಹಾನ್ ವ್ಯಕ್ತಿ ಅಂತಹ ವ್ಯಕ್ತಿ ನನ್ ರಾಮಾಚಾರಿ (ವಿಷ್ಣುವರ್ಧನ್ )’ ಎಂದು ಪ್ರಶಂಸಿಸಿದ್ದಾರೆ. ನಾಗರಹಾವು ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ.

About the Author

ಜನಾರ್ದನರಾವ್ ಸಾಳಂಕೆ
(29 September 1971)

ಜನಾರ್ದನರಾವ್ ಸಾಳಂಕೆ ಅವರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು. ಎಂ.ಎ (ಆರ್ಥಶಾಸ್ತ್ರ) ಹಾಗೂ ಎಂ.ಬಿ.ಎ (ಸಿಸ್ಟಮ್ಸ್) ಪದವೀಧರರು. ಬೆಂಗಳೂರಿನಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದಾರೆ.  ಕೃತಿಗಳು: ಮರೆಯದ ಮಾಣಿಕ್ಯ (ಯಜಮಾನ ಡಾ.ವಿಷ್ಣುವರ್ಧನ್ ಅವರ ಚಿತ್ರಣ) ಸಿಂಹ ಘರ್ಜನೆ (ವಿಷ್ಣುವರ್ಧನ್ ತೀರಿಕೊಂಡ ಮೇಲೆ ನಡೆದ ಎರಡು ವರ್ಷಗಳ ಅವಧಿಯಲ್ಲಿಯ ಬೆಳವಣಿಗೆಗಳು), ಕರುಣಾಮಯಿ (ಡಾ.ವಿಷ್ಣುವರ್ಧನ್ ಅವರ ಕುಟುಂಬ, ಆಪ್ತರು, ಅಭಿಮಾನಿಗಳ ಸಂದರ್ಶನಗಳು), ನಾಗರಹಾವು (ವಿಷ್ಣುವರ್ಧನ್ ಅವರ ಪಾತ್ರದ ವಿಶ್ಲೇಷಣೆ) ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ ಯಶೋಗಾಥೆ.  ಪ್ರಶಸ್ತಿ-ಪುರಸ್ಕಾರಗಳು: ಡಾ.ವಿಷ್ಣುವರ್ಧನ್ ಅವರ ಮೇಲಿನ ನಾಲ್ಕೂ ಪುಸ್ತಕಗಳಿಗೆ ಬೆಂಗಳೂರಿನ ವೆಂಕಟಾಪುರದ ಡಾ.ವಿಷ್ಣು ಸೇನಾ ಸಮಿತಿ,  ಸನ್ ಸ್ಟಾರ್ ನಾಗರಹಾವು ಡಾ.ವಿಷ್ಣುವರ್ಧನ್ ಕ್ರೀಡಾ ಮತ್ತು ಸಾಂಸ್ಕೃತಕ ಟ್ರಸ್ಟ್ , ಕಮಲಾನಗರ. ಬಿನ್ನಿಪೇಟೆಯ ಸಾಮ್ರಾಟ್ ಟೀo, ಲಗ್ಗೆರೆ ...

READ MORE

Related Books