About the Author

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. 

ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ಗಂಗಾಧರ ಚಿತ್ತಾಲರ ಕಾವ್ಯದ ಅಧ್ಯಯನ), ಸ್ಥಿತ್ಯಂತರ, ಸಂಧಿಕಾಲದ ಅನುಸಂಧಾನ, ಕನ್ನಡದ ಹಾಡು ಪಾಡು, ಕುವೆಂಪು ನುಡಿಚಿತ್ರ, ಯುಗವಾಣಿ ಅವರ ಪ್ರಕಟಿತ ಕೃತಿಗಳು.

ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಶಿವಾರೆಡ್ಡಿ ಅವರು ಕುವೆಂಪು ಕನ್ನಡ ತಂತ್ರಾಂಶ ಅಭಿವೃದ್ಧಿ ಯೋಜನೆಯ ಸಂಚಾಲಕರಾಗಿದ್ದರು.

 

ಕೆ.ಸಿ. ಶಿವಾರೆಡ್ಡಿ

(01 Jun 1961)