ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದ ಅವಶ್ಯಕತೆ

Author : ಕೆ.ಸಿ. ಶಿವಾರೆಡ್ಡಿ

₹ 130.00




Published by: ಪುಸ್ತಕ ಮರ
Phone: 9886856364

Synopsys

ಪ್ರೊ. ಕೆ.ಸಿ.ಶಿವಾರೆಡ್ಡಿ ಅವರು ಆಯ್ಕೆ ಹಾಗೂ ಸಂಪದನೆ ಮಾಡಿರುವ ಕೃತಿ ‘ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದ ಅವಶ್ಯಕತೆ’. ಈ ಕೃತಿಯ ಪರಿವಿಡಿಯಲ್ಲಿ ರವೀಂದ್ರನಾಥ ಠಾಕೂರ್ ಅವರ ಗಿಳಿಯ ಕತೆ, ಟಿ.ಪಿ.ಕೈಲಾಸಂ ಅವರ Educationನೂ ಅಂದ್ರೇನು ?, ಬಿ.ಎಂ.ಶ್ರೀ ಅವರ ಕನ್ನಡಮಾತು ತಲೆ ಎತ್ತುವ ಬಗೆ, ಕುವೆಂಪು ಅವರ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದ ಅಗತ್ಯತೆ, ಕುವೆಂಪು ಅವರ ವಿದ್ಯಾರ್ಥಿಗಳಿಗೇಕೆ ಸಾಹಿತ್ಯ?, ಕುವೆಂಪು ಅವರ ಮಕ್ಕಳಿಗೇಕೆ ವೈಚಾರಿಕತೆ?, ಡಿವಿಜಿ ಅವರ ರಾಷ್ಟ್ರಕನಿಗೆ ಸಾಹಿತ್ಯ ಬೇಕೆ?, ಕಾರಂತರ ಭಾಷೆಯ ಬೆಳವಣಿಗೆ: ಬರಹಗಾರ ಹೀಗೆ 27ಕ್ಕೂ ಹೆಚ್ಚು ಸಂಗ್ರಹ ಲೇಖನಗಳಿವೆ.

About the Author

ಕೆ.ಸಿ. ಶಿವಾರೆಡ್ಡಿ
(01 June 1961)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...

READ MORE

Related Books