About the Author

ಕೇಂದ್ರ ಸರ್ಕಾರದ ಪ್ರಸಾರ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಡಾ. ಕೃಷ್ಣಕೊಲ್ಲಾರ ಕುಲಕರ್ಣಿ ಅವರು ಇತಿಹಾಸ-ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರು. ಬಿಜಾಪುರ ಜಿಲ್ಲೆಯ ಕೋಲ್ಹಾರದವರಾದ ಅವರು ಕಾದಂಬರಿ, ನಾಟಕ ಜೀವನ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಆದಿಲ್‌ ಷಾಹಿ ಕಾಲದ ಪಠ್ಯಗಳ ಕನ್ನಡ ಅನುವಾದ ಯೋಜನೆಯ ಸಂಪಾದಕರಾಗಿದ್ದರು.

ಸಿಂದಗಿಯ ಬಿಂದಗಿ, ಕರ್ನಾಟಕ ವೈಭವ ವಾರಪತ್ರಿಕೆ, ಮಾಧ್ವಮಠಗಳು, ಆದಿಲ್‌ಶಾಹಿ ಆಸ್ಥಾನದ ಸಾಹಿತ್ಯ (ಸಂಶೋಧನೆ), ಮಹಿಮಾಪತಿರಾಯರ ಕೀರ್ತನೆಗಳು, ಕೃಷ್ಣದಾಸರ ಕೀರ್ತನೆಗಳು, ತಿಂಮಾಯಣ, ಶ್ರೀಸತ್ಯಧ್ಯಾನದರ್ಶನ (ಸಂಪಾದನೆ), ರತ್ನಾಕರ, ಮನೆ ಮುಳುಗಿತು (ಕಾದಂಬರಿ), ದಾಸ ಮಹಿಪತಿ, ದಾಸ ಜಗನ್ನಾಥ, ಮನುಕುಲ ಒಂದೇ (ನಾಟಕಗಳು), ಜ್ಞಾನಾರ್ಜನೆ (ಸಣ್ಣ ಕಥೆ) ಪ್ರಕಟಿತ ಕೃತಿಗಳು. ಅವರು ಗಮಕ ಕಲಾ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು (2006). 

ಕೃಷ್ಣ ಕೊಲ್ಹಾರ ಕುಲಕರ್ಣಿ

(16 Oct 1940)

Books by Author