‘ಸಮಗ್ರ ದಾಸ ಸಾಹಿತ್ಯ ಸಂಪುಟ-11- ಭಾಗ 1’ ಕಾಖಂಡಕಿ ಕೃಷ್ಣದಾಸರ ಕೀರ್ತನೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಗೊಂಡಿರುವ ಕೃತಿ. ಈ ಸಂಪುಟವನ್ನು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಸಂಪಾದಿಸಿದ್ದಾರೆ. ಹರಿದಾಸರು, ಶ್ರೇಷ್ಠ ಅನುಭಾವ ಕವಿಗಳೂ ಆದ ಕಾಖಂಡಕಿಯ ಮಹಿಪತಿ ರಾಯರ ಮಕ್ಕಳು ಕೃಷ್ಣದಾಸರು. ತಂದೆಯ ದಾರಿಯಲ್ಲಿ ಸಾಗಿದ ಕೃಷ್ಣದಾಸರು ಏಳುನೂರಕ್ಕೂ ಮಿಕ್ಕಿದ ಕೀರ್ತನೆಗಳನ್ನು ಬರೆದಿದ್ದಾರೆ. ಉಗಾಭೋಗ, ಒಂದು ಸುಳಾದಿ ಅನೇಕ ವಚನಗಳ ಜೊತೆಗೆ ಅನೇಕ ಖಂಡ ಕಾವ್ಯಗಳನ್ನೂ, ಆಖ್ಯಾನಗಳನ್ನೂ ರಚಿಸಿದ್ದಾರೆ ವಿಜಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷ್ಣದಾಸರ ಕೃತಿಗಳು ಜನಪ್ರಿಯವಾಗಿವೆ. ಈ ಕೃತಿ ಅವರ ಕೀರ್ತನೆಗಳ ಪೂರ್ಣ ಮಾಹಿತಿಯನ್ನು ಹೊದಗಿಸುತ್ತದೆ.
©2023 Book Brahma Private Limited.