ತುಕಾರಾಮ

Author : ಕೃಷ್ಣ ಕೊಲ್ಹಾರ ಕುಲಕರ್ಣಿ

Pages 74

₹ 50.00




Year of Publication: 2014
Published by: ಸಾಹಿತ್ಯ ಅಕಾಡೆಮಿ
Address: ಸೆಂಟ್ರಲ್ ಕಾಲೇಜ್ ಆವರಣ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು 560001

Synopsys

‘ತುಕಾರಾಮ’ ಕೃತಿಯು ಬಾಲಚಂದ್ರ ನೇಮಾಡೆ ಅವರ ಮೂಲ ಕೃತಿ. ಹಿರಿಯ ಲೇಖಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಅನುವಾದಿತ ವ್ಯಕ್ತಿ ಚಿತ್ರಣವಾಗಿದೆ. ಕೃತಿ ಅನುವಾದಕರು ತಮ್ಮ ಪ್ರಸ್ತಾವನೆಯಲ್ಲಿ, ‘ನಾವು ತುಕಾರಾಮನನ್ನು ಪರಿಚಯಿಸಿಕೊಳ್ಳುವಾಗ, ಕೆಲ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉಚಿತ. ನಾವಿದ್ದದ್ದು ವಿಜ್ಞಾನ ಯುಗದಲ್ಲಿ, ರಾಜಕಾರಣ, ವೃತ್ತಪತ್ರಿಕೆಗಳು, ಮನರಂಜನೆ, ವೈಯಕ್ತಿಕತೆ ಮತ್ತು ಘೋಷಣೆಗಳ ಈ ಯುಗದಲ್ಲಿ ಐಹಿಕ ಜೀವನದ ಸುಖವನ್ನು ಯಾವಾಗಲೂ ಏರಿಸಿಟ್ಟಿದ್ದೇವೆ. ಸೃಜನಾತ್ಮಕ ಸಾಮಾಜಿಕ ಕೆಲಸಗಳಿಗೆ ಸಾಹಿತ್ಯವನ್ನು ಬಳಸುವುದಿಲ್ಲ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜೀವನದ ಪರಿಚಯವಿರದ ಈಗಿನ ಓದುಗರಿಗೆ ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾದ ವಿಚಾರಗಳು ಅಸ್ವೀಕೃತವಾಗಿರಬಹುದು. ಈಗಿನ ಸ್ವರಭಾರ ಆತ್ಮಸ್ವರೂಪದರ್ಶನ, ಅನುಭಾವ ಜಗತ್ತಿಗಿಂತ ಹೊಸ ವಿಜ್ಞಾನದ ಮೇಲಿದೆ. ಕಾಣುವ ಜಗತ್ತಿನ ಕುರಿತಾಗಿದೆ. ಆದರೆ, ಧಾರ್ಮಿಕ ದೃಷ್ಟಿಯಿಂದ ಭಾರತದ ಬಹುತೇಕ ಜನರು ಪವಾಡಗಳು ಜೀವನದ ಅಂಗವೆಂದೇ ಪರಿಗಣಿಸುತ್ತಾರೆ. ಬಹುಶಃ ಇದರಿಂದಲೇ ತುಕಾರಾಮನ ಜೀವನ ಹಾಗೂ ಅವನ ಸಾಹಿತ್ಯ ನಮಗೆ ಹತ್ತಿರವಾಗುತ್ತದೆ. ಭಾರತ ದೇಶದಲ್ಲಿ ಸ್ಥಳೀಯ ಸಂಸ್ಕೃತಿಯು ತನ್ನ ಮೂಲ ರೂಪದಲ್ಲಿ ಬೆಳೆಯಲು ಆಸ್ಪದವನೇ ಕೊಡುವುದಿಲ್ಲ. ಅದೊಂದು ಮುರುಟಿದ ಗಿಡವಿದ್ದಂತೆ, ಭಕ್ತಿ, ಯೋಗ ಮುಂತಾದ ತನ್ನದೇ ಆದ ಶೋಧನೆಗಳೂ ಈ ದೇಶದಲ್ಲಿ, ನಿರಂತರವಾದ ಪರಕೀಯರ ದಾಳಿಯಿಂದ ಬೆಳೆಯಲೇ ಇಲ್ಲ. ತಡವಾಗಿಯಾದರೂ ವಿ. ಎಸ್. ನೈಪಾಲರಿಗೆ ಹೊಳೆದಂತೆ, ಇಲ್ಲಿಯದು “ಗಾಯಗೊಂಡ ಅಥವಾ ಅಪಘಾತಕ್ಕೀಡಾದ ನಾಗರಿಕತೆ.” ಎಂದು ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.

 

About the Author

ಕೃಷ್ಣ ಕೊಲ್ಹಾರ ಕುಲಕರ್ಣಿ
(16 October 1940)

ಕೇಂದ್ರ ಸರ್ಕಾರದ ಪ್ರಸಾರ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಡಾ. ಕೃಷ್ಣಕೊಲ್ಲಾರ ಕುಲಕರ್ಣಿ ಅವರು ಇತಿಹಾಸ-ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರು. ಬಿಜಾಪುರ ಜಿಲ್ಲೆಯ ಕೋಲ್ಹಾರದವರಾದ ಅವರು ಕಾದಂಬರಿ, ನಾಟಕ ಜೀವನ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಆದಿಲ್‌ ಷಾಹಿ ಕಾಲದ ಪಠ್ಯಗಳ ಕನ್ನಡ ಅನುವಾದ ಯೋಜನೆಯ ಸಂಪಾದಕರಾಗಿದ್ದರು. ಸಿಂದಗಿಯ ಬಿಂದಗಿ, ಕರ್ನಾಟಕ ವೈಭವ ವಾರಪತ್ರಿಕೆ, ಮಾಧ್ವಮಠಗಳು, ಆದಿಲ್‌ಶಾಹಿ ಆಸ್ಥಾನದ ಸಾಹಿತ್ಯ (ಸಂಶೋಧನೆ), ಮಹಿಮಾಪತಿರಾಯರ ಕೀರ್ತನೆಗಳು, ಕೃಷ್ಣದಾಸರ ಕೀರ್ತನೆಗಳು, ತಿಂಮಾಯಣ, ಶ್ರೀಸತ್ಯಧ್ಯಾನದರ್ಶನ (ಸಂಪಾದನೆ), ರತ್ನಾಕರ, ಮನೆ ಮುಳುಗಿತು (ಕಾದಂಬರಿ), ದಾಸ ಮಹಿಪತಿ, ದಾಸ ಜಗನ್ನಾಥ, ಮನುಕುಲ ಒಂದೇ (ನಾಟಕಗಳು), ಜ್ಞಾನಾರ್ಜನೆ (ಸಣ್ಣ ಕಥೆ) ಪ್ರಕಟಿತ ಕೃತಿಗಳು. ಅವರು ಗಮಕ ಕಲಾ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು (2006).  ...

READ MORE

Related Books