About the Author

ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ವರ್ಷ ನಡೆಸಿದ್ದರು. ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಪಾಕ್ಷಿಕಗಳಲ್ಲಿ ವ್ಯಾಸರು 120ಕ್ಕೂ ಹೆಚ್ಚು ಕಥೆ ಸೇರಿದಂತೆ ಲೇಖನಗಳನ್ನು ಬರೆದಿದ್ದು, 250 ಬಿಡಿ ಕವನಗಳನ್ನು ಬರೆದಿದ್ದರು. ಅವರು 2008 ರಲ್ಲಿ ನಿಧನರಾದರು.

ಕಂಬನಿ, ಕೃತ, ಸ್ನಾನ, ತಪ್ತ, ಅಸ್ತ್ರ, ಕೆಂಡ, ಕಾಂತ, ದಡ, ಓಟ (ಕತೆಗಳ ಸಂಕಲನ)

ಸುಳಿ, ಸೃಷ್ಟಿ, ಕ್ಷೇತ್ರ (ಕವನ ಸಂಕಲನ)

ಜನಪಥ, ಮೌನಗರ್ಭ (ಲೇಖನಗಳು)

ಎಂ. ವ್ಯಾಸ