ದಡ

Author : ಎಂ. ವ್ಯಾಸ

Pages 120

₹ 70.00
Year of Publication: 2010
Published by: ರೂಪ ಪ್ರಕಾಶನ
Address: #2406, 2407/ಕೆ-1, 1 ನೇ ಕ್ರಾಸ್, ಹೊಸಬಂಡಿಕೇರಿ, ಮೈಸೂರು-570004
Phone: 9342274331

Synopsys

ಬರಹಗಾರ ಎಂ ವ್ಯಾಸ ಅವರ ’ದಡ’ ಕೃತಿಯು ಕಥಾ ಸಂಕಲನವಾಗಿದೆ. ಈ ಕೃತಿಯಲ್ಲಿ 12 ಪರಿವಿಡಿಗಳಿದ್ದು ದಡ, ಚಕ್ರ, ಮರ, ಕೇಳಿ, ಭ್ರೂಣ, ತಾಯಿ, ದಂಗೆ, ಅಕ್ಷ, ಅನ್ನ, ರುಸ್ತುಂ, ಬೆಂಕಿ, ಹುಲಿ ಇ;ಲ್ಲಿರುವ ಕತಾವಸ್ತುಗಳಾಗಿವೆ. ಕೃತಿಗೆ ಮುನ್ನುಡಿ ಬರೆದಿರುವ ವರದರಾಜ ಚಂದ್ರಗಿರಿ ‘ಇಲ್ಲಿರುವ ವಿಚಾರಗಳು ವ್ಯಕ್ತಿತ್ವದೊಳಗಿನ ಕಚ್ಚಾತನಗಳನ್ನು ಹಾಗೆಹಾಗೆಯೇ ತೆರೆದಿಡುತ್ತದೆ. ಬದುಕಿನ ವಿಕರ್ಷಣೆಯಾದ ರುಗ್ಣತೆಗಳತ್ತಲೇ ಗಮನ ಹರಿಸುವ ಈ ಕೃತಿ ಕ್ಷುಬ್ಧತೆಗಳನ್ನೇ ಅಕ್ಷರಗಳಲ್ಲಿ ಧೇನಿಸಿ ತೀವ್ರ ಭಾವದಲ್ಲಿ ವಿಚಾರವನ್ನು ಕಟ್ಟಿಕೊಡುತ್ತದೆ. ವರ್ಗ, ಜಾತಿ, ಧರ್ಮ, ಸಮಾಜ ನಿರ್ಮಿಸಿದ ಕೃತಕ ಬಂಧಗಳನ್ನೆಲ್ಲ ಕಳಚಿಕೊಂಡು ಮನಸ್ಸುಗಳನ್ನು ತಟ್ಟುವ ಸಂವೇದನೆ ಈ ಕಥಾನಕದಲ್ಲಿದೆ. ಇಲ್ಲಿರುವ ಪ್ರತಿಯೊಂದು ಕಥೆಯಲ್ಲೂ ಬೆಂಕಿ ಇದೆ. ಅದು ಚಕ್ರವೋ, ದಡವೋ ಇನ್ಯಾವುದೋ ಆಗಿರಬಹುದು. ಎಲ್ಲ ವಿಚಾರಗಳಲ್ಲೂ ಬೇರೆ ಬೇರೆ ರೂಪದಲ್ಲಿ ಬೆಂಕಿ ಒಳಗೂ ಹೊರಗೂ ಉರಿಯುತ್ತಲೇ ಇದೆ. ಎಪ್ಪತ್ತರ ದಶಕದಿಂದೀಚೆಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬರೆಯಲಾದ ಇಲ್ಲಿನ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದು ವ್ಯಾಸರು ಬರೆದ ಕೊನೆಯ ಕತೆ ಎಂದು ದಾಖಲಾಗುತ್ತದೆ. ನಮ್ಮ ದಿನನಿತ್ಯದ ಅನುಭವಗಳಲ್ಲೇ ಎಂತಹ ಗಾಢವಾದ ಗಾಂಭೀರ್ಯ, ರೌದ್ರ, ವಿಸಂಗತಿಗಳು ಅಡಕವಾಗಿವೆ ಎನ್ನುವುದನ್ನು ಅವರ ಕಥೆಗಳು ತಣ್ಣಗೆ ತೆರೆದು ತೋರಿಸುತ್ತವೆ. ಈ ಮೌನಸಂವಹನ ವ್ಯಾಸರ ಕಥೆಗಳ ವೈಶಿಷ್ಟ್ಯ’ ಎಂದು ಪ್ರಶಂಸಿಸಿದ್ದಾರೆ.

About the Author

ಎಂ. ವ್ಯಾಸ

ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...

READ MORE

Related Books