ಅರ್ಧ ಕಥಾನಕ

Author : ಅನುಪಮಾ ಪ್ರಸಾದ್

Pages 136

₹ 135.00




Year of Publication: 2020
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ
Phone: 9341757653

Synopsys

ಕಥೆಗಾರ ಎಂ. ವ್ಯಾಸರ ಕುರಿತಾದ ಕೃತಿ. ’ಅರ್ಧ ಕಥಾನಕ’ ಎಂಬುದು ಬನಾರಸಿಯ ಆತ್ಮಚರಿತ್ರೆಯ ಹೆಸರು. 17ನೇ ಶತಮಾನದಲ್ಲಿ ಮೊಗಲರ ಆಡಳಿತ ಕಾಲದಲ್ಲಿದ್ದ ಈ ಬನಾರಸಿ, ಅರ್ಧಕಥಾನಕ ಎಂದು ಹೆಸರಿಡಲೂ ಕಾರಣವಿತ್ತು. ಜೈನ ನಂಬಿಕೆಯ ಪ್ರಕಾರ, ಮನುಷ್ಯನ ಆಯಸ್ಸು 110 ವರ್ಷ; ಬನಾರಸಿ ತನ್ನ ಆತ್ಮಕಥಾನಕವನ್ನು ಮುಗಿಸಿದಾಗ ಅವರ ವಯಸ್ಸು 55. ಅಂದರೆ ಆಯಸ್ಸಿನ ಅರ್ಧಭಾಗ. ಹಾಗಾಗಿಯೇ ಇದಕ್ಕೆ 'ಅರ್ಧ ಕಥಾನಕ' ಎಂದು ಕರೆದಿದ್ದ ಎಂದು ಹೇಳುತ್ತಾರೆ. ವ್ಯಾಸರ ಈ ಕಥಾನಕ ಆತ್ಮಕಥಾನಕವಲ್ಲ; ಅಲ್ಲದೆಯೂ ಅಲ್ಲ. ತಮ್ಮ ಜೀವಿತ ಅವಧಿಯಲ್ಲಿ ವ್ಯಾಸರು ಇದನ್ನು ಬರೆಯಲಿಲ್ಲ. ಬರೆಯುವ ಉಮೇದೂ ಅವರಿಗಿರಲಿಲ್ಲ. ಏನಿದ್ದರೂ ಎಲ್ಲವನ್ನೂ ತಮ್ಮ ಕತೆಗಳಲ್ಲಿ ಹೇಳಿಕೊಳ್ಳುವ ನಂಬಿಕೆಯಲ್ಲಿ ಬದುಕಿದ್ದ ಎಂ.ವ್ಯಾಸರನ್ನು ಸಾವು ಬಂದು ಎತ್ತಿಕೊಂಡು ಹೋದದ್ದು ತೀರ ಅಚಾನಕ್ಕಾಗಿ. ಸಾವಿಗೆ ವಯಸ್ಸಿನ ಪರಿವೆ ಇರುವುದಿಲ್ಲ. ಅದು ಬರುವುದೂ, ಹೋಗುವುದೂ ಮನುಷ್ಯರಿಗೇಕೆ, ಯಾವ ಪ್ರಾಣಿಗೂ ತಿಳಿಯುವ ಸಂಗತಿಯಲ್ಲ; ಅದು ಅಚಾನಕ್ಕೇ. ವ್ಯಾಸರು ತೀರಿಕೊಂಡಾಗ ಅವರ ವಯಸ್ಸು 68. ಅನುಪಮಾ ಪ್ರಸಾದ ಅವರು ಕೃತಿಯನ್ನು ನಿರೂಪಿಸಿದ್ದಾರೆ. 

About the Author

ಅನುಪಮಾ ಪ್ರಸಾದ್
(07 October 1971)

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ...

READ MORE

Related Books