ಕೆಂಡ (ಕಥಾ ಸಂಕಲನ)

Author : ಎಂ. ವ್ಯಾಸ

Pages 150

₹ 100.00




Year of Publication: 2009
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ಬಳ್ಳಾರಿ 583113
Phone: 9480353507

Synopsys

ಖ್ಯಾತ ಲೇಖಕ ಎಂ. ವ್ಯಾಸ ಅವರ ’ಕೆಂಡ’ ಕೃತಿಯು ಕತಾಸಂಕಲನವಾಗಿದೆ. ಎಂ. ವ್ಯಾಸ ಕನ್ನಡದ ಕತಾಜಗತ್ತಿನಲ್ಲೊಂದು ವಿಭಿನ್ನ ಮತ್ತು ವಿಶಿಷ್ಟ ಪ್ರತಿಭೆ. ಈ ಕೃತಿಯಲ್ಲಿರುವ ಪ್ರತಿಯೊಂದು ಕತೆಯೂ ಮನುಷ್ಯ ಮನೋವಿಲಾಸದ ನಿರೂಪಣೆಯೇ ಆಗಿದೆ. 14 ಪರಿವಿಡಿಗಳನ್ನು ಈ ಕತಸಂಕಲನ ಹೊಂದಿದ್ದು ಕೆಂಡ, ದತ್ತ, ದ್ವೀಪ, ಬೀಜ, ಜ್ವಾಲೆ, ಬುದ್ದ, ಗೂಡು, ಗೋರಿ, ಯಾಗ, ಶಿಲ್ಪ, ಶ್ರಾದ್ಧ, ಭಿಕ್ಷೆ, ಪೂಜೆ ಇದರಲ್ಲಿರುವ ಕತಾವಸ್ತುಗಳಾಗಿವೆ.  ಮನಸ್ಸು ರೂಪುಗೊಳ್ಳುವುದು ಮನುಷ್ಯ ಕಂಡುಕೊಂಡ ಸತ್ಯ, ಕನಸು ಮತ್ತು ಭ್ರಮೆಗಳಿಂದ. ಹಾಗಾಗಿ, ಮನುಷ್ಯರಿರುವಷ್ಟೇ ವೈವಿಧ್ಯವಾದ ಮನಸ್ಸುಗಳೂ ಇರುತ್ತವೆ. ಹೊರಗೆ ಕಾಣಿಸುವ ಮನುಷ್ಯನ ನಿಜವಾದ ಆಕಾರ ಅಲ್ಲ. ಇಂಥ ಮನಸ್ಸುಗಳೇ ಒಂದೇ ಶ್ರುತಿಯಿಂದ ಹೊರಟ ನಾದತರಂಗಗಳಂತೆ ವ್ಯಾಸರ ಮೂಲಕ ಕತೆಗಳಾಗಿ ಪ್ರಕಟವಾದವು. ಹತಾಶೆಯ ನೋವಿನ ಆಳವನ್ನು ಅರಿತವನೇ ಸುಖದ ಆನಂದವನ್ನು ಅನುಭವಿಸಲು ಸಾಧ್ಯ. ಹೀಗಾಗಿ ದುರಂತಪ್ರಜ್ಞೆಯೂ ಒಂದರ್ಥದಲ್ಲಿ ಸುಖದ ಸೃಷ್ಟಿಯೇ ಆಗಿದೆ ಎನ್ನುವುದು ವ್ಯಾಸರ ನಿಲುವು. ಈ ವಿಷಾದ ನಿಲುವಿನ ಹಿಂದೆ ಹೊತ್ತಿ ಉರಿದ ಬದುಕಿನ ಅನುಭವವಿದೆ. ಹಾಗಿರುವುದರಿಂದಲೇ, ಅದು ಮತ್ತೊಂದು ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿ ಪಡೆಯಿತು ಎನ್ನುತ್ತದೆ ಈ ಕೃತಿ.

About the Author

ಎಂ. ವ್ಯಾಸ

ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...

READ MORE

Related Books