ಕೃತ

Author : ಎಂ. ವ್ಯಾಸ

Pages 220

₹ 110.00




Year of Publication: 2010
Published by: ಶ್ರೀಮತಿ ಜಯಂತಿ ರಮಾನಾಥ್
Address: ರಜತ ಸಾಹಿತ್ಯ, #14, ಸೀತಮ್ಮ ಅನಂತಯ್ಯ ಕಲ್ಯಾಣ ಮಂದಿರದ ಹತ್ತಿರ, 4ನೇ ಅಡ್ಡರಸ್ತೆ, ಒ.ಟಿ.ರಸ್ತೆ, ಶಿವಮೊಗ್ಗ- 577 202
Phone: 9844420216

Synopsys

ಸಾಹಿತಿ, ಕತೆಗಾರ ಎಂ.ವ್ಯಾಸ ಅವರ ಕತೆಗಳ ಸಂಕಲನ ‘ಕೃತ’. 1998ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿಯು 2010ರಲ್ಲಿ ಎರಡನೆ ಮುದ್ರಣವನ್ನು ಕಂಡಿದೆ. ಕೃತ ' ಕಥಾಸಂಕಲನವು ಮಂಗಳೂರು, ಕಣ್ಣೂರು ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿದೆ.

About the Author

ಎಂ. ವ್ಯಾಸ

ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...

READ MORE

Reviews

 ಹೊಸತು-2002- ಫೆಬ್ರವರಿ

ಯಾವ ಹುತ್ತದಲ್ಲಿ ಯಾವ ಹಾವೋ ಎಂಬಂತೆ ವಿವಿಧ ವ್ಯಕ್ತಿಗಳ ಅಂತರಂಗದಲ್ಲಿ ಸುಳಿದಾಡುವ, ಅಳತೆಗೆ ಸಿಗದ ಮನುಷ್ಯನ ನಿಗೂಢ ವ್ಯಕ್ತಿತ್ವದ ಬೆನ್ನುಹತ್ತಿ ಜಾಲಾಡುವ ಕೃತ ಲೇಖಕರು ಕಥಾಸಾಹಿತ್ಯದಲ್ಲಿ ಕ್ರಮಿಸಿರುವ ದಾರಿ ವಿಶಿಷ್ಟ ಹಾಗೂ ನಿಗೂಢ. ಇಲ್ಲಿನ ಕಥೆಗಳ ಮೂಲಕ ಅವರು ಮಾನವನ ವಿವಿಧ ಸ್ವಭಾವಗಳ ಪರಿಚಯ ಮಾಡಿಸುತ್ತಾರೆ. ಅವರು ಬಗೆದಷ್ಟೂ ನಿಗೂಢವಾಗಿ, ಅರ್ಥೈಸಿದಷ್ಟೂ ಒಗಟಾಗಿ ಅಪರಿಚಿತ ಮುಖವಾಡದ ಕಾಮುಕತೆ ಹಾಗೂ ಸಾವು ಸವಾಲೆಸೆಯುತ್ತವೆ. ಬದುಕಿನ ಎರಡು ಮುಖಗಳನ್ನು ಸಂಕೇತಿಸುವಂತೆ ಕಥೆಗಳಿಗೆಲ್ಲ ಎರಡಕ್ಷರದ ಶೀರ್ಷಿಕೆಯಿದೆ.

Related Books