About the Author

ಕವಿ ಪಂಚಾಕ್ಷರಿ ಬಿ. ಪೂಜಾರಿ  ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದವರು. ವೃತ್ತಿಯಿಂದ  ದಂಡಗುಂಡ ಬಸವಣ್ಣನ ದೇವಸ್ಥಾನದ ಅರ್ಚಕರು. ಬಿ.ಎ. ಪದವೀಧರರು. ತಂದೆ ಬಸವಣ್ಣೆಪ್ಪ ಪೂಜಾರಿ ತಾಯಿ ಮಹಾದೇವಮ್ಮ ಪೂಜಾರಿ. ದಂಡಗುಂಡ ಸರಕಾರಿ  ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು. ಕಸಾಪ ದಿಗ್ಗಾವಿ ವಲಯ ಅಧ್ಯಕ್ಷರು. 

ಕೃತಿಗಳು: ಅಂತರಾಳದ ಪ್ರಭೆ (ವಚನಗಳ ಸಂಕಲನ), ಗುಡ್ಡದ ಗುಡುಗು (ತತ್ವಪದಗಳ ಸಂಕಲನ), ಮನದಾಳದ ಮಾತು (ನುಡಿಮುತ್ತುಗಳು), ತತ್ವಪದ ಸಂಪದ (ತತ್ವಪದಗಳ ಸಂಪಾದನಾ ಗ್ರಂಥ), ದಂಡಗುಂಡ ಬಸವಣ್ಣ ನಾಮಾವಳಿ,  ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ, ದಿಗ್ಗಾವಿ ದೀಪ (ಕವನ ಸಂಕಲನ) 

ಪ್ರಶಸ್ತಿ-ಗೌರವಗಳು: ಚಿತ್ತಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನಿಂದ ರಾಜ್ಯೋತ್ಸವ ಪ್ರಶಸ್ತಿ (2017) ಕನ್ನಳ್ಳಿಯ ಸಗರನಾಡು ಪ್ರತಿಷ್ಠಾನದಿಂದ ಸಗರನಾಡು ಸೇವಾ ರತ್ನ ಪ್ರಶಸ್ತಿ (2019) 

ಪಂಚಾಕ್ಷರಿ ಬಿ. ಪೂಜಾರಿ

(10 Aug 1960)