About the Author

ಲೇಖಕ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಮೂಲತಃ  ಕಲಬುರಗಿ ಜಿಲ್ಲೆಯ  ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾದಕರು. 1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಬಿಸಿಲನಾಡು ಪ್ರಕಾಶನ ಸಂಸ್ಥೆಯೂ ನಡೆಸುತ್ತಿದ್ದಾರೆ.

ಕೃತಿಗಳು: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ (ಮಕ್ಕಳ ಕಥನ)  ಹುಕುಂಪತ್ರ (ಐತಿಹಾಸಿಕ ನಾಟಕ) -ತತ್ವಪದಕಾರ ಚನ್ನೂರ ಜಲಾಲ್‌ಸಾಹೇಬರ ಜೀವನ, ಕಲಬುರಗಿ ರಂಗಾಯಣದ ಮೂಲಕ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶಿತ) ‘ ಒಳಿತು ಮಾಡು ಮನುಜ’ ಕಥೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದೆ. ವಿರುಪಾಕ್ಷಪ್ಪ ಗೌಡ (ಜೀವನ ಚಿತ್ರಣ), ಜ್ಞಾನ ದಾಸೋಹಿ ದೊಡ್ಡಪ್ಪ ಅಪ್ಪಾಜಿ,  ಹಿಂಗ್ಯಾಕಂತಾರೆ (ಅಂಕಣಗಳ ಬರಹ),  ಸುಬೇದಾರ ರಾಮಜಿ ಸಕ್ಪಾಲ್  (ಜೀವನ ಚಿತ್ರಣ) ವಚನಬ್ರಹ್ಮ ದಾಸಿಮಯ್ಯ( ಜೀವನಚರಿತ್ರೆ, ವಚನಗಳ ವಿಶ್ಲೇಷಣೆ), ಮನಸೇ ಬದುಕು ನಿನಗಾಗಿ ( ಗಜಲ್ ಸಂಕಲನ)

ಪ್ರಶಸ್ತಿ-ಪುರಸ್ಕಾರಗಳು: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ರಾಜ್ಯ ಯುವ ಪ್ರಶಸ್ತಿ, ಕರ್ನಾಟಕ ಸರಕಾರದ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ (ಕೃತಿ: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ) ಪುಸ್ತಕ ಬಹುಮಾನ,  ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಚಿನ್ನದ ಪದಕ. 

ಪ್ರಭುಲಿಂಗ ನೀಲೂರೆ

(22 Jul 1974)