ಮನಸೇ...ಬದುಕು ನಿನಗಾಗಿ

Author : ಪ್ರಭುಲಿಂಗ ನೀಲೂರೆ

Pages 106

₹ 90.00




Year of Publication: 2020
Published by: ಬಿಸಿಲು ನಾಡು ಪ್ರಕಾಶನ
Address: # 1-871, ವೆಂಕಟೇಶ ನಗರ, ಕಲಬುರಗಿ- 585102,
Phone: 9481000094

Synopsys

ಮನಸೇ... ಬದುಕು ನಿನಗಾಗಿ-ಈ ಕೃತಿಯನ್ನು ಲೇಖಕ ಪ್ರಭುಲಿಂಗ ನೀಲೂರೆ ರಚಿಸಿದ್ದಾರೆ. ಕವಿಗಳ ಮೊದಲ ಗಜಲ್ ಸಂಕಲನ. ಗಜಲ್ ಬರಹ ಇತ್ತೀಚೆಗೆ ಟ್ರೆಂಡ್ ಆಗಿ ರೂಪುಗೊಂಡಿದೆ. ಕವಿ ಮನಸ್ಸಿನವರನ್ನು ಈ ಪ್ರಕಾರ ಆಯಸ್ಕಾಂತದಂತೆ ಆಕರ್ಷಿಸುತ್ತಿದೆ. ಅದು ಈ ಪ್ರಕಾರಕ್ಕಿರುವ ಚುಂಬಕ ಶಕ್ತಿ. ವ್ಯಷ್ಟಿ ಪ್ರಜ್ಞೆಯಿಂದ ಸಮಷ್ಟಿಯತ್ತ ಸಾಗುವ ಗಜಲ್ ಕವಿ,  ರೈತನ ಚಿಂತಾಜನಕ ಸ್ಥಿತಿಗಾತಿ ಮರಗುತ್ತಾನೆ. ಬುದ್ಧ, ಬಸವ, ಸೂಫಿ, ಶರಣರ ನೆನಪುಗಳ ಕಾಡುವಿಕೆಗೆ ‘ ಜಗಕೆ ಶಾಂತಿ ಮಂತ್ರ ಪಠಿಸಿ ನಗೆ ಹಂಚಲು ಸಜ್ಜಾಗಬೇಕಿದೆ ನೋಡು’ ಎಂದು ಹೇಳುವ ಕವಿ ಬಯಸುತ್ತಿರುವುದು ಸಮಾಜದಲ್ಲಿ ಶಾಂತಿ, ನೆಮ್ಮದಿ, ನಿರಾಂತಕ. ಧರ್ಮ, ಜಾತಿ, ಮತ, ಪಂಥಗಳ ವಿರೋಧಿಸುವ ನೀಲೂರೆಯವರು ವ್ಯವಸ್ಥೆಯ ವ್ಯಂಗ್ಯವನ್ನು ಗಜಲ್ ಮೂಲಕ ಸಮರ್ಥವಾಗಿ ಹೊರಹಾಕಿದ್ದಾರೆ.

ಪ್ರೇಮದ ಉತ್ಕಟತೆ, ವಿರಹ ವೇದನೆ, ಅಂತರಂಗದ ನೋವು, ಅಪರೂಪದ ಸಾಂಗತ್ಯ, ಎರಡು ಹೃದಯಗಳ ಮಾತು, ವೌನ, ನಲಿವು, ಮನಸ್ಸಿನ ನಿಷ್ಕಲ್ಮಷತೆ, ಒಂಟಿತನ, ಸಾತ್ವಿಕ ನಿರಾಕರಣೆ ಮುಂತಾದ ಸಂಗತಿಗಳು ಈ ಕೃತಿಯಲ್ಲಿ ಗಜಲ್ ರೂಪ ತಾಳಿವೆ. ಭಾವಗೀತೆಗಳ ಓದಿನ ಮುದ ನೀಡಿದಂತೆನಿಸಿದರೂ ಸೂಕ್ಷ್ಮತೆ, ವಿವಶತೆ, ಆರ್ದ್ರತೆಗಳಿಂದ ಒಂದುಗೂಡಿದ ಕಾವ್ಯಬಂಧದ ಕಟ್ಟುವಿಕೆ ಕವಿಗೆ ಇಲ್ಲಿ ಸಾಧ್ಯವಾಗಿದೆ.

About the Author

ಪ್ರಭುಲಿಂಗ ನೀಲೂರೆ
(22 July 1974)

ಲೇಖಕ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಮೂಲತಃ  ಕಲಬುರಗಿ ಜಿಲ್ಲೆಯ  ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾದಕರು. 1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಬಿಸಿಲನಾಡು ಪ್ರಕಾಶನ ಸಂಸ್ಥೆಯೂ ನಡೆಸುತ್ತಿದ್ದಾರೆ. ಕೃತಿಗಳು: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ (ಮಕ್ಕಳ ಕಥನ)  ಹುಕುಂಪತ್ರ (ಐತಿಹಾಸಿಕ ನಾಟಕ) -ತತ್ವಪದಕಾರ ಚನ್ನೂರ ...

READ MORE

Related Books