About the Author

ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. ಕಾವ್ಯ, ತತ್ವಶಾಸ್ತ್ರ,  ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ಭೂಮಿಗಂಧ - 2006, ಚಂದ್ರನೀರ ಹೂವು – 2013, ಒಂದಿಷ್ಟು ಪ್ರೀತಿಗೆ, ಕವಿತೆಗಳು – 2013, ಕೋವಿ ಮತ್ತು ಕೊಳಲು - 2014, ಲಾವೋನ ಕನಸು - 2016, ಬ್ರೆಕ್ಟ್ ಪರಿಣಾಮ - 2018, ನೀರೊಳಗೆ ಮಾಯದ ಜೋಳಿಗೆ - 2018 ಅವರ ಕವನ ಸಂಕಲನಗಳು. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ. ಅವರ ಈ ಸಾಹಿತ್ಯದೊಲವಿಗೆ 2014ರಲ್ಲಿ ಬೇಂದ್ರೆ ಗ್ರಂಥ ಬಹುಮಾನ, 2016ರಲ್ಲಿ ಅವರ ಸೃಜನಶೀಲ ಕಾವ್ಯ ರಚನೆಗೆ ‘ಟೋಟೋ ಪುರಸ್ಕಾರ’,  2016ರಲ್ಲಿ ‘ಕಡೆಂಗೋಡ್ಲು ಕಾವ್ಯ ಪುರಸ್ಕಾರ’, 2019ರ ನರಹಳ್ಳಿ ಪ್ರಶಸ್ತಿಗಳು ಸಂದಿವೆ. 2017ರ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಮತ್ತಿತರೆ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. 2019ರ ಡೆಕ್ಕನ್ ಹೆರಾಲ್ಡ್‌ ಪತ್ರಿಕೆಯ ರಾಜ್ಯ ಮಟ್ಟದ Changemakers - 2020ಗೆ ಆಯ್ಕೆ. 

ರಾಜೇಂದ್ರ ಪ್ರಸಾದ್

(19 Mar 1987)

BY THE AUTHOR