ಉಲುಹಿನ ವೃಕ್ಷದ ನೆಳಲು

Author : ರಾಜೇಂದ್ರ ಪ್ರಸಾದ್

Pages 160

₹ 160.00




Year of Publication: 2020
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401
Phone: 9019529494

Synopsys

‘ಉಲುಹಿನ ವೃಕ್ಷದ ನೆಳಲು’ ಕವಿ ರಾಜೇಂದ್ರ ಪ್ರಸಾದ್ ಅವರ ಕವನ ಸಂಕಲನ. ಈ ಪುಸ್ತಕಕ್ಕೆ ಕೆ.ಪಿ. ಸುರೇಶ ಅವರು ಬೆನ್ನುಡಿ ಬರೆದು ‘ರಾಜೇಂದ್ರರ ಕವನಗಳನ್ನು ಓದುತ್ತಿದ್ದರೆ ತಟ್ಟನೆ ಗೋಚರಿಸುವುದು ಎರಡು ಅಂಶಗಳು. ಒಂದು: ವಿವರಗಳನ್ನು ಸೂಕ್ಷ್ಮವಾಗಿ ಹಿಡಿಯುವ ಪದಲಾಘವತೆ. ಮತ್ತೊಂದು:ಒಳಭಾವಗಳ ಸಣ್ಣಮಿಡಿತವನ್ನೂ ಮನಂಬುಗುವಂತೆ ಒಪ್ಪಿಸುವ ಬಗೆ. ಮೊದಲನೆಯದು ಲೋಕದ ಭೌತಿಕ ವಿವರಗಳನ್ನು ಭಾವ ಸಂವಾದಿಯಾಗಿ ಹಿಡಿಯುವ ಬಗೆ. ಎರಡನೆಯದು ಮೂಲತಃ ತನ್ನೊಳಗೆ ತಾನೇ ಸಂವಾದಿಸಿ ಅದನ್ನು ಓದುಗನದ್ದೂ ಎಂಬಂತೆ ಸಾದರಪಡಿಸುವ ಬಗೆ’, ಮೊದಲನೆಯದು ಕವಿಗೆ ಅವಶ್ಯ ಬೇಕಾದ ಹೊಸ ಬಗೆಯ ನೋಡುವ ಇಂದ್ರಿಯ ಪ್ರತಿಭಾ ಕೌಶಲ್ಯ. ಅದರಲ್ಲೇ ಸೊಕ್ಕಿದರೆ ಕವಿ ಜಾಣ ಕವಿಯಾದಾನು. ಹೆಚ್ಚೆಂದರೆ ಸರ್ಕಸ್ಸಿನ ಟ್ರೆಪೀಜ್ನಲ್ಲಿ ತುಯ್ದು ಕಸರತ್ತು ಮಾಡುವ ಬೆರಗು ಹುಟ್ಟಿಸಿಯಾನು. ಎರಡನೆಯದು ತನ್ನೊಳಗೇ ಆದ್ರವಾಗಿ ಸಂವಾದಿಸುವ ಬಗೆ ಈ ಕುಶಲಿಯನ್ನು ಕವಿಯಾಗಿಸುವತ್ತ ಎತ್ತಿ ಮುನ್ನಡೆಸುತ್ತೆ. ಇವೆರಡೂ ಇದ್ದರೆ ಸಾಕೇ? ತಾನು ಕಾಣುವ ಎಲ್ಲವನ್ನೂ; ಗ್ರಹಿಸುವ ಎಲ್ಲವನ್ನೂ ಒಂದು ನೈತಿಕ ನೆಲೆಯಿಂದ ನೋಡಬೇಕು. ಅದು ಓದುಗನಿಗೆ ಅಹುದಹುದೆನ್ನಿಸುವಂತಿರಬೇಕು. ರಾಜೇಂದ್ರನಲ್ಲಿ ಈ ಮೂರೂ ಕಾವ್ಯ ಅವಯವಗಳು ಸರಿಯಾಗಿವೆ. ಜೊತೆಗೆ, ಕವನ ಬರೆವ ಉತ್ಕಟತೆ, ಪುಷ್ಟ ಸಮೃದ್ಧಿಯನ್ನು ತರುತ್ತಿದೆ. ಅದು ಸಮಾಧಾನದ ಸಂಗತಿ. ಇದಕ್ಕಿಂತಲೂ ಹೆಚ್ಚಾಗಿ, ಈತ ಅಲ್ಪತೃಪ್ತನಲ್ಲ; ಕಾವ್ಯದೋಷಗಳಿಗೆ ಮೈಯೆಲ್ಲಾ ಕಣ್ಣಾಗಿ ಗಮನಿಸುವವನು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ರಾಜೇಂದ್ರ ಪ್ರಸಾದ್
(19 March 1987)

ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. ಕಾವ್ಯ, ತತ್ವಶಾಸ್ತ್ರ,  ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ಭೂಮಿಗಂಧ - 2006, ಚಂದ್ರನೀರ ಹೂವು – 2013, ಒಂದಿಷ್ಟು ಪ್ರೀತಿಗೆ, ಕವಿತೆಗಳು – 2013, ಕೋವಿ ಮತ್ತು ಕೊಳಲು - 2014, ಲಾವೋನ ಕನಸು - 2016, ಬ್ರೆಕ್ಟ್ ಪರಿಣಾಮ - 2018, ನೀರೊಳಗೆ ಮಾಯದ ಜೋಳಿಗೆ - 2018 ಅವರ ಕವನ ಸಂಕಲನಗಳು. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ. ಅವರ ...

READ MORE

Related Books