ನೀರೊಳಗೆ ಮಾಯದ ಜೋಳಿಗೆ

Author : ರಾಜೇಂದ್ರ ಪ್ರಸಾದ್

Pages 92

₹ 100.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

’ನೀರೊಳಗೆ ಮಾಯದ ಜೋಳಿಗೆ’ ಕವಿ ರಾಜೇಂದ್ರ ಪ್ರಸಾದ್‌ ಅವರ ಆರನೇ ಕವನ ಸಂಕಲನ. ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಪ್ರಸ್ತಾಪಿಸಿರುವಂತೆ ’ಕವಿತೆ ಎನ್ನುವುದು ಎಲ್ಲರೂ ಗುನುಗುವ, ಹಾಡುವ, ಕುಣಿಯುವ, ಜಡಗೊಂಡ ಜೀವವ ಬಡಿದೆಬ್ಬಿಸುವ ಬೆಳಕಾಗಬೇಕು ಎನ್ನುವ ಈ ಕವಿ, ಬೋದಿಲೇರ್ ಮಾದರಿಯನ್ನು ತಮ್ಮ ಕವಿತೆಯೊಂದರಲ್ಲಿ ಬಿಡಿಸಿಡುವ ಮೂಲಕ ತಮ್ಮ ಕಾವ್ಯದ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ’ ಎನ್ನುತ್ತಾರೆ. 


ಸಾವಿನ ಜೊತೆ ಹಾಸಿಗೆ, ನೀರೊಳಗೆ ಮಾಯದ ಜೋಳಿಗೆ, ಕನ್ನಡಿ ಕಣ್ಣು ನಿನ್ನ ನೆರಳೂ ನಿನ್ನದಲ್ಲ ಬುದ್ದ ಕೊಟ್ಟು ಹೋದ ಬಟ್ಟಲು, ಬಲ್ಲವರ ಮೌನ, ಬೆಳಕಿನೊಂದು ಹೂ ತೊಟ್ಟು ಹೊರಡಬೇಕು ನಾಳೆಗೆ, ಎರಡು ಊರಿನ ನಡುವೆ, ಮೊಳೆಗಳು, ಕುಬ್ಬ ನಕ್ಷತ್ರ, ಬಿನ್ನಾಣದ ಬೆಕ್ಕು - ಇವು ರಾಜೇಂದ್ರ ಪ್ರಸಾದ್ ಬರೆದ ಕವಿತೆಗಳ ಕೆಲವು ಶೀರ್ಷಿಕೆಗಳೇ ಬರೀ  ಕವಿತೆಗಳಂತಿವೆ. 

ವಚನ ಸಾಹಿತ್ಯದ ನುಡಿಗಟ್ಟು ಮತ್ತು ಚಿಂತನೆಗಳು ಆಳದಲ್ಲಿ ಆವರಿಸಿವೆ. ಕಳೆದುಹೋದ ಲೋಕವನ್ನು ವರ್ತಮಾನದಲ್ಲಿ ಮತ್ತೆ ಕಡೆಯುತ್ತಾ ಪ್ರತಿಮಾನಿಷ್ಟವಾದ ಕವಿತೆಗಳನ್ನು ಬರೆಯುತ್ತಾ ಇರುವ ರಾಜೇಂದ್ರ ಪ್ರಸಾದ್ ತಮ್ಮ ಕವಿತೆಗಳ ಕುರಿತು ಸ್ವತಃ ಹೇಳಿಕೊಳ್ಳುವುದು ಹೀಗೆ: ’ಕವಿತೆಯನ್ನು ಕಾಣಲು ಶುರುವಾಗಿಬಿಟ್ಟರೆ ಲೋಕ ತಾನು ಬೇರೆಯಾಗಿ ಕಾಣುವುದೇ ಇಲ್ಲ ಈ ಎರಡೊಂದಾದ ಬಳಿಕ ಎಲ್ಲ ಮಾತುಗಳೂ ವೇಷ, ಹೀಗೆ ಉಳಿದುಹೋದ ಮಾತುಗಳೇ ಇಲ್ಲಿ ನಾನಾ ತಲೆಬರಹಗಳಲ್ಲಿ ಮೈವೆತ್ತಿ ನಿಂತಿವೆ.’

About the Author

ರಾಜೇಂದ್ರ ಪ್ರಸಾದ್
(19 March 1987)

ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. ಕಾವ್ಯ, ತತ್ವಶಾಸ್ತ್ರ,  ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ಭೂಮಿಗಂಧ - 2006, ಚಂದ್ರನೀರ ಹೂವು – 2013, ಒಂದಿಷ್ಟು ಪ್ರೀತಿಗೆ, ಕವಿತೆಗಳು – 2013, ಕೋವಿ ಮತ್ತು ಕೊಳಲು - 2014, ಲಾವೋನ ಕನಸು - 2016, ಬ್ರೆಕ್ಟ್ ಪರಿಣಾಮ - 2018, ನೀರೊಳಗೆ ಮಾಯದ ಜೋಳಿಗೆ - 2018 ಅವರ ಕವನ ಸಂಕಲನಗಳು. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ. ಅವರ ...

READ MORE

Related Books