About the Author

ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್‌.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ. 

‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ನಿವಾಸಿ ಶ್ರೀ ಮಹಾಲಕ್ಷ್ಮಿ:ಪ್ರಾಚೀನ ಮರಾಠಿ ಶಾಸನಗಳು; ಶರೀರ ಸಾಕ್ಷಾತ್ ಪರಮೇಶ್ವರ; ಮನುಷ್ಯ ಜನ್ಮದ’ ಮುಂತಾದ ಕರತಿಗಳನ್ನು ಸಂಪಾದಿಸಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಹಲವಾರು ಸಂಸ್ಥೆಗಳು ‘ರಾಜ್ಯ ನಾಟಕ ಅಕಾಡೆಮಿ ರಂಗ ಚಿಂತಕ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಬಹುಮಾನ’ಗಳನ್ನು ನೀಡಿ ಗೌರವಿಸಿವೆ. 

ರಾಮಕೃಷ್ಣ ಮರಾಠೆ

(25 May 1958)