ರಂಗಯಾತ್ರೆ

Author : ರಾಮಕೃಷ್ಣ ಮರಾಠೆ

Pages 142

₹ 120.00




Published by: ನಾಟ್ಯಭೂಷಣ ಏಣಗಿ ಬಾಳಪ್ಪ ಪ್ರತಿಷ್ಠಾನ, ಬೆಳಗಾವಿ
Phone: 7349759508

Synopsys

ಕನ್ನಡ ರಂಗಭೂಮಿಯ ಪ್ರಮುಖ ಕಲಾವಿದ ಏಣಗಿ ಬಾಳಪ್ಪನವರ ಆತ್ಮಕಥನವಿದು. ಆ ದಿನದ ನಾಟಕ, ಅದರ ಗಳಿಕೆ, ಅವರು ಭೇಟಿಯಾದ ವ್ಯಕ್ತಿಗಳ ಕುರಿತು, ತಾವು ಭೇಟಿ ನೀಡಿದ ಊರು, ಸ್ಥಳಗಳ ಬಗ್ಗೆ ತಮ್ಮ ಆತ್ಮಕತೆಯದಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಕುಟುಂಬದ ಪ್ರೀತಿ; ರಂಗಸಂಸ್ಥೆಗಳೊಂದಿಗಿನ ಒಡನಾಟ; ಭಾಷಣ ಪ್ರಶಸ್ತಿಗಳು, ಹೀಗೆ ಮೂರು ಭಾಗಗಳಾಗಿ ರಂಗಯಾತ್ರೆಯ ನೆನಪುಗಳು ಈ ಕೃತಿಯಲ್ಲಿ ಆವರಿಸಿಕೊಂಡಿವೆ. ಬಾಳಪ್ಪ ಅವರ ನೆನಪುಗಳನ್ನು ಸ್ವತಃ ದಾಖಲಿಸಿದ್ದು, ಪಾರ್ಶ್ವವಾಯುವಿಗೆ ತುತ್ತಾದ ನಂತರ ರಂಗ ಚಟುವಟಿಕೆಯ ಅನುಭವಗಳನ್ನು  ದಾಖಲು ಮಾಡಿದ್ದಾರೆ.

 

About the Author

ರಾಮಕೃಷ್ಣ ಮರಾಠೆ
(25 May 1958)

ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್‌.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ.  ‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ...

READ MORE

Related Books