About the Author

ಬರಹಗಾರ, ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಮೂಲತಃ ಮೈಸೂರಿನವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಎಸೆನ್ಶಿಯಲ್ ಕೋರ್ಸ್‌‌ ಹಾಗೂ ಚಿಕಾಗೋದ ಡೆಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ಕೋರ್ಸ್‌ ಪ್ರಮಾಣ ಪತ್ರ ಪಡೆದದ್ದಾರೆ. 

ಪ್ರಸ್ತುತ ಮ್ಯಾನೇಜ್‌ಮೆಂಟ್ ತಜ್ಞರಾಗಿ ಚಿಕಾಗೋದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳಲ್ಲಿ ಬರವಣಿಗೆ ಕೂಡ ಒಂದು. ಪೂರ್ಣ ಚಂದ್ರ ತೇಜಸ್ವಿ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಕನ್ನಡದ ದಿನಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದಾರೆ.  ಹುಯನ್ ತ್ಸಾಂಗ್‌ನ ಮಹಾಪಯಣ, ಭಾರತ ಒಂದು ಮರುಶೋಧನೆ ಇವರ ಪ್ರಮುಖ ಕೃತಿಗಳು.

ರವಿ ಹಂಜ್