ಅರಿದಡೆ ಆರದು ಮರೆದೊಡೆ ಮೂರದು

Author : ರವಿ ಹಂಜ್

Pages 250

₹ 250.00
Year of Publication: 2023
Published by: ಸಂವಹನ ಪ್ರಕಾಶನ
Address: ರಾಜೇಂದ್ರ ಪ್ರಿಂಟರ್ಸ್ ಆಂಡ್ ಪಬ್ಲಿಷರ್ಸ್, 12/1,  ಇವಿನಿಂದ ಬಜಾರ್ ಹಿಂದೆ, ಶಿವರಾಂ ಪೇಟೆ, ಮೈಸೂರು
Phone: 9902639593

Synopsys

ಸಂಶೋಧನಾತ್ಮಕ ಕೃತಿಗಳಿಗೆ ಹೆಸರಾಗಿರುವ ರವಿ ಹಂಜ್ ಅವರ ಪ್ರಸ್ತುತ "ಅರಿದಡೆ ಆರದು, ಮರೆದೊಡೆ ಮೂರದು" ಕೃತಿಯು ಅವರ ಮೊದಲ ಕಾದಂಬರಿ ಪ್ರಯೋಗವಾಗಿದೆ. ಆದರೂ ತಮ್ಮ ಛಾಪಿನ ಇತಿಹಾಸ ಸಂಶೋಧನಾ ನೆಲೆಯನ್ನು ಸಂಪೂರ್ಣವಾಗಿ ತ್ಯಜಿಸದೆ ಅದನ್ನು ಆಧಾರವಾಗಿ ಬಳಸಿ ವಾಸ್ತವದ ಮಠೀಯ ವ್ಯವಸ್ಥೆಯನ್ನು ಸಂವೇದನೆ, ವಿಡಂಬನೆ, ಹಾಸ್ಯ, ತರ್ಕ, ತತ್ವಗಳ ಸಂಯೋಗಶೀಲತೆಯ ಪಾತ್ರ, ಸನ್ನಿವೇಶ ಸೃಷ್ಟಿಗಳ ಹೂರಣದೊಂದಿಗೆ ಕಥನವನ್ನು ಅತ್ಯಂತ ನೈಜವಾಗಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಅದರ ಸನ್ನಿವೇಶವನ್ನು ಬಿಂಬಿಸುವ ಪೂರಕವಾದ ವಚನವನ್ನು ಪೀಠಿಕೆಯಾಗಿ ಉಲ್ಲೇಖಿಸುತ್ತ ಹನ್ನೆರಡನೇ ಶತಮಾನದಿಂದ ಪ್ರಸ್ತುತ ಕಾಲಮಾನದವರೆಗೂ ಚಾಚಿರುವ ಕಥಾವಸ್ತುವಿನ ವಿಸ್ತಾರತೆಯನ್ನು ಅನೂಹ್ಯವಾಗಿಸಿ ಆ ವಚನಗಳಲ್ಲಿನ ಕಾಲಜ್ಞಾನವನ್ನು ಕಾಲಾತೀತಗೊಳಿಸುತ್ತಾರೆ. ಸಮಗ್ರವಾಗಿ ಹೇಳಬೇಕೆಂದರೆ ಸದ್ಗುಣಶೀಲವು ಹೇಗೆ ಕಾಲಯಾನದಲ್ಲಿ ದುರ್ಗುಣಸಂಪನ್ನವಾಗುತ್ತದೆ ಎಂಬ ನಿದರ್ಶನದ ದೃಶ್ಯಪ್ರತಿಮೆಯೇ, "ಅರಿದಡೆ ಆರದು, ಮರೆದೊಡೆ ಮೂರದು!"

About the Author

ರವಿ ಹಂಜ್

ಬರಹಗಾರ, ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಮೂಲತಃ ಮೈಸೂರಿನವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಎಸೆನ್ಶಿಯಲ್ ಕೋರ್ಸ್‌‌ ಹಾಗೂ ಚಿಕಾಗೋದ ಡೆಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ಕೋರ್ಸ್‌ ಪ್ರಮಾಣ ಪತ್ರ ಪಡೆದದ್ದಾರೆ.  ಪ್ರಸ್ತುತ ಮ್ಯಾನೇಜ್‌ಮೆಂಟ್ ತಜ್ಞರಾಗಿ ಚಿಕಾಗೋದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳಲ್ಲಿ ಬರವಣಿಗೆ ಕೂಡ ಒಂದು. ಪೂರ್ಣ ಚಂದ್ರ ತೇಜಸ್ವಿ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಕನ್ನಡದ ದಿನಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದಾರೆ.  ಹುಯನ್ ತ್ಸಾಂಗ್‌ನ ಮಹಾಪಯಣ, ಭಾರತ ಒಂದು ಮರುಶೋಧನೆ ಇವರ ಪ್ರಮುಖ ಕೃತಿಗಳು. ...

READ MORE

Related Books