ರ ಠ ಈ ಕ...

Author : ರವಿ ಹಂಜ್

₹ 250.00




Year of Publication: 2022
Published by: ಸಂವಹನ ಪ್ರಕಾಶನ
Phone: 919902639593

Synopsys

ಲೇಖಕ ರವಿ ಹಂಜ್‌ ಅವರ ಚೊಚ್ಚಲ ಕಾದಂಬರಿ ʼರ ಠ ಈ ಕ...ʼ. ಪುಸ್ತಕದ ಬಗ್ಗೆ ಸ್ವತಃ ಲೇಖಕರೇ ಹಿನ್ನುಡಿಯಲ್ಲಿ, “ಆತ್ಮ ಎಂಬುದು ಘನಲಿಂಗವಾಗಿಯೂೂ ಮತ್ತು ಚರಿತ್ರೆ ಎನ್ನುವುದು ಪುರಾಣವಾಗಿಯೂ, ಅತ್ಯಚರಿತ್ರೆಗಳು 'ಆಯನ್ನಮಃ ಪಾರ್ವತೀಪತಿ ಹರ ಹರ ಮಹಾದೇವ' ಎನ್ನುವ ಆತ್ಮರತಿಯಾಗಿಬಿಟ್ಟಿವೆ. ಆ ಪುರಾಣಗಳಲ್ಲಿ ನಾನು, ನನ್ನದು ಎಂಬ ಮುಷ್ಟಿ, ಮುಖವಲ್ಲದೇ ನವರಂಧ್ರಗಳ ಮೈಥುನ ಬಿಟ್ಟರೆ ಸಮಾಜವೆಂಬ ಅಂಗದಲ್ಲಿ ಐಕ್ಯವಾಗುವ ಅತ್ಮ ಅಂಗೈಕ್ಯದ ನಿರ್ಭಾವ ಸಂಗಮ ಸಿಗುವುದು ಅತ್ಯಲ್ಪ. ನಾನಾರೆಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ ಎಂಬ ಅಧ್ಯಾತ್ಮವನ್ನು ಹಾಡಿ, ನನ್ನನು ಬಿಟ್ಟರೆ ಯಾರೂ ಇಲ್ಲ, ಜಗವೇ ನನದೆಲ್ಲ ಎಂದು ಬರೆಯುವ ಅತ್ಯಚರಿತ್ರೆಯನ್ನು ಅತ್ಮವಿಟ್ಟು ಕೊಂಡು ಬರೆಯುವುದಿರಲಿ, ಓದುವುದೂ ಕಷ್ಟ. ಮಾನವ ಹುಟ್ಟು ಕುತೂಹಲಿ. ಎಲ್ಲರಂತೆಯೇ ಅವನು ನೋಡುತ್ತ, ಮುಟ್ಟುತ್ತ, ನೆಕ್ಕುತ್ತ ಆ ಕುತೂಹಲವನ್ನು ತಣಿಸುತ್ತ ಬೆಳೆವ ಪರಿಯೇ ಮಾನವತೆಯ ಮೂಲ. ಅಂತಹ ಒಬ್ಬ ಸಾಮಾನ್ಯ ಬಾಲಕ, ಮಾನವ ಸಹಜ ಕುತೂಹಲದಿಂದ ತನ್ನ ಸುತ್ತಲಿನ ಸಮಾಜವನ್ನು ನೋಡುತ್ತ, ಕೇಳುತ್ತ, ಮುಟ್ಟುತ್ತ ಹೇಗೆ ಸಮಾಜದ ಅಂಗವಾಗಿ ಬೆಳೆದ ಎಂಬಂತಹ ನಮ್ಮದೂ ಇದೇ ಕತೆಯೆನಿಸುವ ಸಾಮಾನ್ಯ ಕತೆಯ ಒಂದು ತುಣುಕು ಈ ಜೀವನಕತೆಯಾಗಿದೆ. ಆ ಬಾಲಕ ಯಾವುದೇ ಅತಿಮಾನವನಾಗದೇ ನಮ್ಮ ನಿಮ್ಮೆಲ್ಲರಂತೆಯೇ ಸಹಜಮಾನವನಾದ ಪರಿಯ ಸಾಮಾಜಕ ಚಿತ್ರಣ" ಎಂದು ಹೇಳಿದ್ದಾರೆ.

About the Author

ರವಿ ಹಂಜ್

ಬರಹಗಾರ, ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಮೂಲತಃ ಮೈಸೂರಿನವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಎಸೆನ್ಶಿಯಲ್ ಕೋರ್ಸ್‌‌ ಹಾಗೂ ಚಿಕಾಗೋದ ಡೆಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ಕೋರ್ಸ್‌ ಪ್ರಮಾಣ ಪತ್ರ ಪಡೆದದ್ದಾರೆ.  ಪ್ರಸ್ತುತ ಮ್ಯಾನೇಜ್‌ಮೆಂಟ್ ತಜ್ಞರಾಗಿ ಚಿಕಾಗೋದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳಲ್ಲಿ ಬರವಣಿಗೆ ಕೂಡ ಒಂದು. ಪೂರ್ಣ ಚಂದ್ರ ತೇಜಸ್ವಿ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಕನ್ನಡದ ದಿನಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದಾರೆ.  ಹುಯನ್ ತ್ಸಾಂಗ್‌ನ ಮಹಾಪಯಣ, ಭಾರತ ಒಂದು ಮರುಶೋಧನೆ ಇವರ ಪ್ರಮುಖ ಕೃತಿಗಳು. ...

READ MORE

Related Books