ಅಮೇರಿಕೆಯಿಂದ ಅವಲೋಕಿಸುತ್ತ..

Author : ರವಿ ಹಂಜ್

₹ 200.00




Published by: ಸಾಧನ ಪಬ್ಲಿಕೇಶನ್
Address: ನಂ.15/16, ಶಿವಕಾಂಪ್ಲೆಕ್ಸ್, ಡಾ.ರಾಜ್ ಪ್ರತಿಮೆ ಎದುರು, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು- 53
Phone: 9480088960

Synopsys

ರವಿ ಹಂಜ್ ಅವರ ಲೇಖನ ಸಂಕಲನ ಅಮೇರಿಕೆಯಿಂದ ಅವಲೋಕಿಸುತ್ತ..ಪತ್ರಿಕೆಗಳಲ್ಲಿ ಬಂದ ನನ್ನ ಲೇಖನಗಳನ್ನು ಸಂಗ್ರಹಿಸಿ ಇವುಗಳನ್ನು ಪುಸ್ತಕ ಓದುಗರು ಓದಲೇಬೇಕೆಂದು ಪ್ರಕಾಶಕ ಮಿತ್ರ ರವಿಚಂದ್ರರಾವ್ ಕೃತಿಯಾಗಿಸಿದ ಫಲ, "ಅಮೇರಿಕೆಯಿಂದ ಅವಲೋಕಿಸುತ್ತ"!. ಈ ಲೇಖನಗಳು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗಳನ್ನು ಹೊಂದಿದ್ದರೂ ವೈಚಾರಿಕವಾಗಿ ಸರ್ವಕಾಲಿಕವಾಗಿ ನಿಲ್ಲಬಲ್ಲ ಲೇಖನಗಳು ಎಂಬ ಹಿನ್ನೆಲೆಯಲ್ಲಿ ಪ್ರಕಾಶಕರು ಖುದ್ದು ಕಾಳಜಿ ವಹಿಸಿ ಪ್ರಕಟಿಸಿದ್ದಾರೆ. ಅದಕ್ಕೆ ರವಿಚಂದ್ರರಾವ್ ಅವರಿಗೆ ಧನ್ಯವಾದಗಳು. ಅಷ್ಟೇ ಕಾಳಜಿಯಿಂದ ಭಾರತದ ಆಗುಹೋಗಿನ ಬಗ್ಗೆ ತೀವ್ರ ಕಳಕಳಿ ಮತ್ತು ಚಿಂತನಶೀಲ ಆಸಕ್ತಿ ಹೊಂದಿರುವ ಓದುಗರು ಈ ಕೃತಿಯನ್ನು ಮೆಚ್ಚುವರೆಂಬ ಆಸ್ಥೆ ನನ್ನದು ಎಂಬುದಾಗಿ ಲೇಖಕರು ಬರೆದಿದ್ದಾರೆ.

About the Author

ರವಿ ಹಂಜ್

ಬರಹಗಾರ, ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಮೂಲತಃ ಮೈಸೂರಿನವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಎಸೆನ್ಶಿಯಲ್ ಕೋರ್ಸ್‌‌ ಹಾಗೂ ಚಿಕಾಗೋದ ಡೆಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ಕೋರ್ಸ್‌ ಪ್ರಮಾಣ ಪತ್ರ ಪಡೆದದ್ದಾರೆ.  ಪ್ರಸ್ತುತ ಮ್ಯಾನೇಜ್‌ಮೆಂಟ್ ತಜ್ಞರಾಗಿ ಚಿಕಾಗೋದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳಲ್ಲಿ ಬರವಣಿಗೆ ಕೂಡ ಒಂದು. ಪೂರ್ಣ ಚಂದ್ರ ತೇಜಸ್ವಿ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಕನ್ನಡದ ದಿನಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದಾರೆ.  ಹುಯನ್ ತ್ಸಾಂಗ್‌ನ ಮಹಾಪಯಣ, ಭಾರತ ಒಂದು ಮರುಶೋಧನೆ ಇವರ ಪ್ರಮುಖ ಕೃತಿಗಳು. ...

READ MORE

Related Books