About the Author

ಲೇಖಕ-ಕವಿ ಸ.ಜಗನ್ನಾಥ ಅವರು ಬೆಂಗಳೂರು ವಿಶ್ವ ವಿದ್ಯಾಲಯದಿಂದ ಬಿ.ಎ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ವಿಷಯದಲ್ಲಿ ಎಂ.ಎ. ಪದವೀಧರರು. ರಾಮನಗರ ಉಪವಿಭಾಗದಲ್ಲಿ ಕರ್ನಾಟಕ ವಿದ್ಯುಚಕ್ತಿ ಮಂಡಳಿಯಲ್ಲಿ ಬೆರಳಚ್ಚುಗಾರರಾಗಿ, ನಂತರ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದಲ್ಲಿ (ಕಾವೇರಿ ಭವನ), ನಿಗಮ ಕಚೇರಿಯ ಆಂತರಿಕ ಪರಿಶೊಧನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದು, 1985ರಿಂದಲೂ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಇವರ ಕವನಗಳು, ಸಣ್ಣ ಕಥೆಗಳು, ರೂಪಕಗಳು, ಕಿರುನಾಟಕಗಳು, ಲೇಖನಗಳು, ಹಾಸ್ಯ ಬರಹಗಳು ಪ್ರಸಾರವಾಗಿವೆ.

ಕೃತಿಗಳು: ಚೈತ್ರಪ್ರಿಯಾ(ಕವನ ಸಂಕಲನ-1988), ಅನುರಾಗದ ಆಸರೆ(ಸಾಮಾಜಿಕ ಕಾದಂಬರಿ-1988) ಗಂಗೇ ಗಂಡನ ಪದಗಳು(ಆಡು ಭಾಷೆಯ ಆತ್ಮೀಯ ಕವನಗಳು- 1991), ಕೇಳು ಜಗದೀಶ್ವರಾ (ವಚನಗಳ ಸಂಕಲನ- 1996), ಬಾರೆನ್ನ ಸಿರಿಯೇ(ಪ್ರೇಮ ಕವನಗಳು), ಸ.ಜಗನ್ನಾಥ ಅವರ ಸಣ್ಣ ಕತೆಗಳು(1999), ಚೈತ್ರೋತ್ಸವ( ಭಾವಗೀತೆಗಳು- 2008), ಅವಳಿ ಕೃತಿಗಳಾದ ನವಿಲು ಗರಿ (ಹನಿಗವಿತೆಗಳ ಸಂಕಲನ) ಎಲ್ಮೆಟ್ ಸಾ ..ಎಲ್ಮೇಟು (ಹಾಸ್ಯ ಲೇಖನ ಹಾಗೂ ಲೇಖನಗಳು -2011), 

ಪ್ರಶಸ್ತಿ-ಪುರಸ್ಕಾರಗಳು: ಇವರಿಗೆ ಸಾಹಿತ್ಯ ಶಿಲ್ಪಿ, ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಲಭಿಸಿವೆ.

ಸ. ಜಗನ್ನಾಥ

(10 Oct 1954)