ಮೊದಲ ಹೆಜ್ಜೆ

Author : ಶಶಿಧರ ಹೆಗಡೆ ಕೊಳಗಿ

Pages 80

₹ 100.00




Year of Publication: 2023
Published by: ಹೆಚ್.ಎಸ್.ಆರ್.ಎ ಪ್ರಕಾಶನ
Address: 12, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರನಗರ, ಲಗ್ಗೆರೆ, ಬೆಂಗಳೂರು- 56058

Synopsys

`ಮೊದಲ ಹೆಜ್ಜೆ' ಶಶಿಧರ ಹೆಗಡೆ ಕೊಳಗಿ ಅವರ ಕವನಸಂಲಕಲನವಾಗಿದೆ. ಇಲ್ಲಿನ ಕವಿತೆಗಳು ಮನಸಿನ ಹಾರಾಟ, ಲಘುತ್ವಗಳನ್ನು 'ಅರಳೆ' ಸಮರ್ಥವಾಗಿ ಸೂಚಿಸಬಲ್ಲುದಾಗಿದೆ. ಓ ಬದುಕೇ' ಪದ್ಯ ಈ ಕವಿತೆಯ ಚಿಂತನೆಯನ್ನು ಇನ್ನೊಂದು ದಿಕ್ಕಿನಲ್ಲಿ ಬೆಳೆಸಿದಂತಿದೆ. 'ವರ್ತಮಾನದ ವಿಮರ್ಶೆಯಲಿ' ಕವಿ ಕಂಡುಕೊಂಡಿರುವುದು: 'ಸತ್ಯದ ಕೆಂಡವು ಸುಳ್ಳಿನ ಬೂದಿಯಲಿ ಮುಚ್ಚಿದೆ'. ಆದರೆ ಕಡೆಗೊಂದು ದಿನ ಅದು ಎಲ್ಲರನ್ನೂ, ಎಲ್ಲವನ್ನೂ ಜಯಿಸುವುದು ಎಂಬ ನಂಬುಗೆಯೂ ಕವಿತೆಯ ತುದಿಮಾತಾಗಿ ಪ್ರಕಟವಾಗಿದೆ. ಕನಸಿನ ಪಯಣವನ್ನು ತನ್ನೆಲ್ಲ ಅಸ್ಪಷ್ಟಣೆ, ಗೊಂದಲಗಳೊಡನೆ ನಿವೇದಿಸುವ ಕವಿತೆ 'ಶೀರ್ಷಿಕೆಯಳನ್ನು' "ತುಟಿ ಹೊಲಿದುದರಿಂದ ಮಾತುಗಳು ಹೃದಯದೊಳಗೇ ಉಳಿದು ತಲ್ಲಣ ಹೆಚ್ಚಿಸಿವೆ. ಮನದ ಜಿಂಕೆ ತಡೆಯಿರದೆ ಓಡುತ್ತಿದೆ”, ಇಂಥ ಮಾತುಗಳಿಂದ ಕವಿ ತನ್ನ ಸಂದಿಗ್ಧಗಳನ್ನು ತೋಡಿಕೊಳ್ಳುತ್ತಿದ್ದಾರೆ. ಮಲೆನಾಡಿನ ನಿಸರ್ಗದ ಚಿತ್ರಗಳು ಇವರ ಮನಸ್ಸನ್ನು ರೂಪಿಸಿವೆ. ಆಕೃತ್ರಿಮವಾದ ಜೀವನದೃಷ್ಟಿಯನ್ನು ಇವರು ಬೆಳೆಸಿಕೊಂಡಂತೆ ತೋರುತ್ತದೆ. ಇಂಥ ಕವಿಗೆ ಸವಾಲೊಡ್ಡುವನ್ನು ನಮ್ಮ ವರ್ತಮಾನದ ಬದುಕು ಸಂಕೀರ್ಣವಾಗಿದೆ, ಸಂಕ್ಷೋಭೆಯದೂ ಆಗಿದೆ. ಆದರೆ ವರ್ತಮಾನದ ಬದುಕಿನ ಹಿಂಸಾತ್ಮಕತೆಗೆ ರೋಸಿ ಹೋದ ಸಹೃದಯರಿಗೆ ಇವರ ಕಾವ್ಯಜಗತ್ತಿನ ಸರಳತೆ ಮತ್ತು ಸಹಜ ಶಾಂತಿ ವಿಸ್ಮಯ ಹುಟ್ಟಿಸಬಹುದು.

About the Author

ಶಶಿಧರ ಹೆಗಡೆ ಕೊಳಗಿ

ಯುವಕವಿ ಶಶಿಧರ ಹೆಗಡೆ ಕೊಳಗಿ ಮೂಲತಃ ಶಿರಳಗಿಯ ಸಿದ್ದಾಪುರ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯವರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಚೊಚ್ಚಲ ಕೃತಿ ‘ಮೊದಲ ಹೆಜ್ಜೆ’.  ...

READ MORE

Related Books