About the Author

ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು.

" ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ಎಲ್ಲಾ ಪತ್ರಿಕೆಗಳ ವಿಶೇಷಾಂಕಗಳನ್ನು ಬರೆಯುತ್ತಿರುತ್ಥಾರೆ. ಕನ್ನಡದ ಪ್ರಮುಖ ಅಕಾಡೆಮಿ ಹಾಗು ಸಾಹಿತ್ಯ ಪರಿಷತ್ತು ಪ್ರಕಟಿಸುವ ಸಂಪಾದನಾ ಕೃತಿಗಳಲ್ಲಿ ಲೇಖನ ಮತ್ತು ವೈಜ್ಞಾನಿಕ ಕಥೆಗಳು ಪ್ರಕಟವಾಗಿವೆ ದಿಬ್ಬದ ಬಂಗಲೆ, ಎರಡನೆಯ ಹೆಜ್ಜೆ, ಸೂರ್ಯ ಗರ್ಭ, ಮಹಾ ಯುದ್ಧ, ನಾನು ಅಘೋರಿಯಲ್ಲ, ಕಾಶ್ಮೀರದಲ್ಲೊಂದು ಸಂಜೆ, ಮಹಾ ಪತನ ಕೆಂಪು ಚಕ್ರಗಳು, ಹಸಿವು ಗೆದ್ದ ಹುಡುಗಿ ( ಹೋರಾಟ – ಇರೋಮ ಶರ್ಮಿಳಾ ಚಾನು – ಕಥಾನಕ), ಯಾವ ಪ್ರೀತಿಯೂ ಅನೈತಿಕವಲ್ಲ - ಮನೋ ವೈಜ್ಞಾನಿಕ, ಅವನು ಶಾಪಗ್ರಸ್ಥ ಗಂಧರ್ವ, ಕಾಶ್ಮೀರವೆಂಬ ಖಾಲಿ ಕಣಿವೆ ಇವರ ಹಲವು ಕಾದಂಬರಿಗಳು. ಮೂರನೆಯ ಆಯಾಮದಲ್ಲಿ, ತಡವಾಗಿ ಬಿದ್ದ ಮಳೆ (ಕಥಾ ಸಂಕಲನ)ಜನಪ್ರಿಯ, ಮೂರನೆಯ ಕಣ್ಣು (ಜನಪ್ರಿಯ ವಿಜ್ಞಾನ ಸಾಹಿತ್ಯ),. ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಮಾಧ್ಯಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜೀವ ಗಾಂಧಿ ಎಕ್ಸೆಲೆನ್ಸಿ ಗೋಲ್ಡ್ ನ್ಯಾಶನಲ್ ಅವಾರ್ಡ್, ಡಾ. ಶಿವರಾಮ್ ಕಾರಂತ ಪ್ರಶಸ್ತಿ, ಕರ್ನಾಟಕ ಭೂಷಣ  ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಸಂತೋಷ್ ಕುಮಾರ ಮೆಹೆಂದಳೆ