ವೈಜಯಂತಿಪುರ

Author : ಸಂತೋಷ್ ಕುಮಾರ ಮೆಹೆಂದಳೆ

Pages 330

₹ 375.00
Year of Publication: 2023
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

ವೈಜಯಂತಿಪುರ ಸಂತೋಷಕುಮಾರ ಮೆಹಂದಳೆ ಅವರ ಐತಿಹಾಸಿಕ ಕೃತಿಯಾಗಿದೆ. ಐತಿಹಾಸಿಕ ಹಿನ್ನೆಲೆಯ ಕದಂಬ ಸಾಮ್ರಾಜ್ಯದ ಕಾದಂಬರಿ ನನ್ನ ಮಟ್ಟಿಗೆ ಮಹತ್ವಾಕಾಂಕ್ಷೆಯ ವಿಷಯ ವಸ್ತು ಮಾತ್ರವಲ್ಲ ಈ ಮೊದಲು ದಾಖಲಿಸದ ಇನ್ನು ಮುಂದೆ ಸುಲಭಕ್ಕೆ ದಾಖಲಿಸಲಾಗದ ಇತಿಹಾಸದ ಆಧಾರಗಳನ್ನು ಬಳಸಿ, ಅಲ್ಲಲ್ಲೇ ಸೂಚಿತವಾಗಿಸಿ ರಚಿತವಾದ ಕಾದಂಬರಿಯಾಗಿದೆ.

ಮಯೂರನ ಕುರಿತಾದ ಸಂತೋಷಕುಮಾರ ಮೆಹಂದಳೆ ರವರು ಬರೆದ 327 ಪುಟಗಳ ಬೃಹತ್  ಕಾದಂಬರಿ ವೈಜಯಂತಿಪುರ ಓದಿದಾಗ ಮಯೂರನ ಬಗ್ಗೆ ಕದಂಬರ ಬಗ್ಗೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಎನಿಸಿತು.ಈ ಭಾವನೆ ಮೂಡಲು ಕಾರಣರಾದ ಮೆಹೆಂದಳೆ ರವರಿಗೆ ನಮನಗಳು. ತಿಂಗಳ ಅಂತರದಲ್ಲಿ ನಾಲ್ಕನೆಯ ಮುದ್ರಣ ಕಂಡ ಕೃತಿಯು ಇನ್ನೂ ಹಲವು ಮುದ್ರಣ ಕಾಣುವಲ್ಲಿ ಸಂಶಯವಿಲ್ಲ.

ಕ್ರಿ ಶ 316 ರಿಂದ 355 ರವರೆಗೆ  ನಮ್ಮ ನಾಡನ್ನು  ಆಳಿದ ಪ್ರಥಮ ಸಾಮ್ರಾಜ್ಯದ ಸ್ಥಾಪಕ ಮತ್ತು ಮಹಾನ್ ರಾಜ ಕದಂಬ ಸಾಮ್ರಾಟ್ ಮಯೂರಶರ್ಮ ನ ಮಹಾಚರಿತೆ ಓದದೇ ಇದ್ದರೆ ನಮ್ಮ ನಾಡಿನ ಮಹಾನ್ ಐತಿಹಾಸಿಕ ಮಾನವೀಯ ಗುಣಗಳ, ಜನಾನುರಾಗಿ , ಮತ್ಸದ್ದಿಯ ಬಗ್ಗೆ ನೀವು ತಿಳಿಯುವುದೇ ಇಲ್ಲ.

ತಾತ ವೀರಶರ್ಮರೊಂದಿಗೆ  ಪಲ್ಲವರ ನಾಡಿನ  ಕಂಚಿಗೆ ವಿದ್ಯಾಭ್ಯಾಸಕ್ಕೆ ತೆರಳಿದಾಗ ಅನುಭವಿಸಿದ ಅವಮಾನ ಮುಂದೊಂದು ದಿನ ಪಲ್ಲವರ ಸಾಮ್ರಾಜ್ಯದ ಪತನವಾಗಿ ಹೆಮ್ಮೆಯ ಕರ್ನಾಟ ಸಾಮ್ರಾಜ್ಯದ ಉದಯವಾಗುವುದೆಂದು ಮಯೂರನ ಬಿಟ್ಟು ಬೇರಾರಿಗೂ ತಿಳಿದಿರಲಿಕ್ಕಿಲ್ಲ. ಶಾಸ್ತ್ರ ಹೇಳುವವನು  ಶಸ್ತ್ರ ಹಿಡಿದು ಸಾಮ್ರಾಜ್ಯ ಕಟ್ಟಬಲ್ಲ ಎಂಬುದನ್ನು ನಿರೂಪಿಸದವ ಮಯೂರ.

ಕಾದಂಬರಿಯ ಮೊದಲ ಅದ್ಯಾಯದಿಂದ ಕಡೆಯವರೆಗೆ ಓದುತ್ತಾ ಹೋದಂತೆ ಇನ್ನೂ ಓದಬೇಕು. ಎಂಬ.ವೇಗ..ವೇಗ.. ಒಂದೊಳ್ಳೆಯ ಸಿನಿಮಾದ ಸ್ಕ್ರೀನ್ ಪ್ಲೇ ಮತ್ತು ಎಡಿಟಿಂಗ್ ಚೆನ್ನಾಗಿದ್ದರೆ ಆ ಸಿನಿಮಾ ಸೋಲುವುದೆಲ್ಲಿ ಬಂತು .ವೈಜಯಂತಿಪುರ ಆ ಮಟ್ಟದ ಅನುಭವವನ್ನು ಓದುಗರಿಗೆ ನೀಡುತ್ತದೆ. ನಾಲ್ಕನೇ ಶತಮಾನದ ಚಿತ್ರಣವನ್ನು ಕಟ್ಟಿ ಕೊಡುವಲ್ಲಿ ಕಾದಂಬರಿಕಾರರು ಗೆದ್ದಿದ್ದಾರೆ. ಅದರಲ್ಲೂ ಯುದ್ಧದ ಸನ್ನಿವೇಶಗಳ ವರ್ಣನೆ ಓದುವಾಗ ಗ್ರಾಫಿಕ್ಸ್ ಇಲ್ಲದೇ ನಮ್ಮ ಕಣ್ಮುಂದೆ ಯುದ್ಧದ ಸನ್ನಿವೇಶಗಳು ಬಂದು ನಿಲ್ಲುತ್ತವೆ. 

About the Author

ಸಂತೋಷ್ ಕುಮಾರ ಮೆಹೆಂದಳೆ

ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...

READ MORE

Excerpt / E-Books

ಪುಸ್ತಕ ಪರಿಚಯ: 

ಇದು ಮಯೂರನ ಮೂರು ಪುಟದ ಕತೆಯಲ್ಲ. ಮೂರು ದಶಕದ ರಕ್ತಸಿಕ್ತ ಚರಿತ್ರೆ. ಇದು ಉತ್ತರದ ಗುಪ್ತರನ್ನು ತಡೆದ, ದಕ್ಷಿಣದ ಪಲ್ಲವರ ಬಡಿದು ಬಾಯಿಗಿಟ್ಟುಕೊಂಡ ರಣವಿಣಳ್ಯದ ಕದನ ಕಾದಂಬರಿ. ಇಲ್ಲಿಯವರೆಗಿನ ಲಬ್ಯವಿರದಿದ್ದ ಕದಂಬರ ಮೊದಲ ಸಾಮ್ರಾಟನ ಕಥಾನಕ. ಇದು ಕನ್ನಡಕ್ಕೆ ಅಸ್ಮಿತೆ ಮತ್ತು ಐತಿಹಾಸಿಕ ದಾಖಲೆ ಬಿಟ್ಟು ಹೋದ ಮಹಾವೀರನ ಬಗೆಗಿನ ಕಾದಂಬರಿ. ಇಲ್ಲಿವರೆಗಿನ ಕದಂಬರ ಚರ್ವಿತ ಚರ್ವಣ ದಾಖಲೆಗಳನ್ನು ಒರೆಗೆ ಹಚ್ಚಲಿದೆ. ಏನೂ ಅಲ್ಲದ ಬಡ ವಿದ್ಯಾರ್ಥಿ ಒಬ್ಬ ಸಾಮ್ರಾಜ್ಯ ಕಟ್ಟಿದ ಕತೆ. ಇದು ಆಗಿನ ಕುಂತಳ ಸಾಮ್ರಾಜ್ಯ ಕನ್ನಡ, ಕರ್ನಾಟಕ ಎಂದು ಗುರುತಿಸಿಕೊಳ್ಳಲು ಕೊಡುಗೆಯಾದ ರಣವೀರನ ಇತಿಹಾದ ಮೊದಲ ಕನ್ನಡ ಶಾಸನ ಬರೆಸಿ ದಾಖಲಿಸಿದ ವೀರನ ಕಥಾನಕ.ನಮ್ಮ ನಿಮ್ಮೆಲ್ಲರ ವೈಜಯಂತಿಪುರ (ಬನವಾಸಿಯ)ರೋಚಕ ಇತಿಹಾಸ. ಅವನು ಹುಟ್ಟು ಹಾಕಿದ್ದೇ ಗೆರಿಲ್ಲ ಯುದ್ದ ಪದ್ದತಿ. ಸಹಸ್ರಾರು ಜನ ರಕ್ತ ಚೆಲ್ಲಿ ಕಟ್ಟಿದ ಮೊದಲ ಕನ್ನಡ ಸಾಮ್ರಾಜ್ಯ. ಬೂಲೋಕದ ಸ್ವರ್ಗವೆಂದೇ ಹೆಸರಾಗಿದ್ದ ಬನವಾಸಿಯ ಕಥಾನಕ. ಕಾಳಿದಾಸ ಕಾಲಿಟ್ಟ ನೆಲ. ಇಂತ ರಣರೋಚಕ ಚರಿತ್ರೆ ಬರೆದವನ ಹೆಸರು ಮಯೂರ ಶರ್ಮ. ಅವನು ಹೆಣಗಳಿಗೆ ಇದುವರೆಗೂ ಲೆಕ್ಕ ಸಿಕ್ಕಿಲ್ಲ.

Related Books