About the Author

ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ  ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು. 

ಕೃತಿಗಳು-ಪ್ರಶಸ್ತಿಗಳು:  ಮಗ್ಗಲು ಮನೆ ಅತಿಥಿ ಮತ್ತು ಇತರ ನಾಟಕಗಳು  (ಗುಲಬರ್ಗಾ ವಿ.ವಿ.ಯಿಂದ ಪುಸ್ತಕ ಬಹುಮಾನ ಪ್ರಶಸ್ತಿ),  ಮಹಿಳಾ ಸಾಹಿತ್ಯ ಮತ್ತು ಸಮಸ್ಯೆಗಳು (ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕ ಬಹುಮಾನ ಪ್ರಶಸ್ತಿ), ಶರಣ ಗೊಲ್ಲಾಳ (ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠದಿಂದ ಶ್ರೀ ಗುರು ಕಾರುಣ್ಯ ಪ್ರಶಸ್ತಿ,), ವೀರರತ್ನ ಕುಮಾರ ರಾಮ (ಗುಲಬರ್ಗಾ ವಿವಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು), ಆಧುನಿಕ ಕನ್ನಡದಲ್ಲಿ ಮಹಿಳಾ ಸಾಹಿತ್ಯ (ಸಂಶೋಧನಾ ಮಹಾಪ್ರಬಂಧ), ಸೀಗಿ-ಗೌರಿ ಹಾಡುಗಳು (ಸಂಪಾದನೆ), ಡಾ. ಸಿಂಪಿ ಲಿಂಗಣ್ಣ ಜಾನಪದ ಅಧ್ಯಯನ ವೇದಿಕೆ ಸ್ಮರಣಿಕೆ ಮತ್ತು ಪ್ರಶಸ್ತಿ, ಮಹಾದೇವಿಯಕ್ಕನ ಯೋಗಾಂಗ ತ್ರಿವಿಧಿ ಒಂದು ತಾತ್ವಿಕ ವಿಶ್ಲೇಷಣೆ (ಹುಬ್ಬಳ್ಳೀ-ಧಾರವಾದ ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಸಾಹಿತ್ಯ ಸರಸ್ವತಿ ಪ್ರಶಸ್ತಿ,), ಮಹಾದೇವಿ ಅಕ್ಕನ ಮತ್ತು ಲಕ್ಕಮ್ಮನ ಆಯ್ದ ವಚನಗಳ ವ್ಯಾಖ್ಯಾನ (ಬಸವಕಲ್ಯಾಣದ ವಿಶ್ವ ಬಸವಧರ್ಮ ಟ್ರಸ್ಟ್ ನಿಂದ ಅನುಭವ ಮಂಟಪ ಪುಸ್ತಕ ಪ್ರಶಸ್ತಿ), ಉತ್ತರ ಕರ್ನಾಟಕದ ಜಾನಪದ ಆಚರಣೆಗಳು, ಕಥನಗೀತೆ ಮಾಲೆ (ಕನ್ನಡ ನಾಡು ಲೇಖಕ ಹಾಗೂ ಓದಿಗರ ಸಹಕಾರ ಸಂಘದಿಂದ ಸಾಹಿತ್ಯ ಶ್ರೀ ಪ್ರಶಸ್ತಿ), ಕವಯಿತ್ರಿ ವಾಸಂತಿಕ ಬಕ್ಕಣ್ಣವರ ಬದುಕು ಬರಹ, ಬಗಟಿಗೊಂದು ಉತ್ತರ ಒಡಪಿಗೊಂದು ಹೆಸರು, ಜನಪದ ಮಹಿಳೆಯರ ಜೀವಪರ ಧ್ವನಿ,  ಸೋಬಾನ ಪದಗಳು, ಗೋಲಗೇರಿ ಗೊಲ್ಲಾಳ, ಮಹಿಳಾ ಸಾಹಿತ್ಯ ಮತ್ತು ಸಂವೇಧನೆ, ಸೀಮಂತ ಪದಗಳು, ಘನಮನ ಸಂಪನ್ನರು, ತೊಟ್ಟಿಲ ಪದಗಳು, 

ಶಕುಂತಲಾ ಸಿದ್ಧರಾಮ ದುರಗಿ

(11 Apr 1943)