About the Author

ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಟಿ. ನುಲೇನೂರು ಗ್ರಾಮದವರು. ಅಲ್ಲಿಯೇ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಹೊಳಲ್ಕೆರೆ ಯಲ್ಲಿ ವಾಸವಿದ್ದು, ಹೊಳಲ್ಕೆರೆಯ ಅಮೃತಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ.

ಕೃತಿಗಳು: ನನ್ನ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್ (ಮಕ್ಕಳ ಹಾಡುಗಳು), ವಚನಾಂಜಲಿ, ಫೋಟೋಕ್ಕೊಂದು ಫ್ರೇಮು (ಕವನ ಸಂಕಲನ)

ಪ್ರಶಸ್ತಿ ಪುರಸ್ಕಾರಗಳು: ತಾಲೂಕು ಅತ್ಯುತ್ತಮ ಶಿಕ್ಷಕ ಪುರಸ್ಕಾರ (2009), ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕಾರ (2017), ರೋಟರಿ ಅತ್ಯುತ್ತಮ ಶಿಕ್ಷಕ ನೇಷನ್ ಬಿಲ್ಡರ್ ಅವಾರ್ಡ್(2013 ಮತ್ತು 2019), ‘ಫೋಟೊಕ್ಕೊಂದು ಪ್ರೇಮು’ ಪುಸ್ತಕಕ್ಕೆ ರೋಣ ಗಜೇಂದ್ರಗಡ ಕನ್ನಡ ಸಾಹಿತ್ಯ ಪರಿಷತ್ತಿನಿಂದ "ಸಾಹಿತ್ಯ ಚಿಗುರು" ಪ್ರಶಸ್ತಿ 2019 ಲಭಿಸಿದೆ. 

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ನಿಂದ ಅಸ್ಸಾಂ ರಾಜ್ಯದ ಗೌಹಾತಿಯಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಭಾಗಿ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಕಾರ್ಯಗಳಿಗಾಗಿ ಪುರಸ್ಕಾರ, 2021 ರಲ್ಲಿ ಬೆಂಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತನಿಂದ ಕನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಕರುನಾಡ ಹಣತೆ ಸಾಹಿತ್ಯ ಬಳಗದಿಂದ (2021) ಕರುನಾಡ ಸಾಧಕ ರತ್ನ ರಾಜ್ಯ ಪ್ರಶಸ್ತಿ, ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ರಾಜ್ಯದ ಎಲ್ಲ ಬಾನುಲಿಗಳಲ್ಲಿ ಸ್ವರಚಿತ ಕಥೆ "ಡಾಲಿ" ಕಥೆ ವಾಚನ ಪ್ರಸಾರವಾಗಿದೆ. ಚಿತ್ರದುರ್ಗ ಆಕಾಶವಾಣಿ ಯಿಂದ ಇವರ  ಕಥೆ-ಕವನಗಳು ಪ್ರಸಾರವಾಗಿವೆ. 2019 ರಲ್ಲಿ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇವರು ರಚಿಸಿದ  ರೂಪಕ "ಗುರುಭ್ಯೋ ನಮಃ" ಧ್ವನಿಮುದ್ರಿತಗೊಂಡು ರಾಜ್ಯಾದ್ಯಂತ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರವಾಗಿದೆ. 

 

ಟಿ.ಪಿ. ಉಮೇಶ