About the Author

ಬೆಂಗಳೂರಿನಲ್ಲಿ ನೆಲೆಸಿರುವ ಪದ ಸುಡೊಕು ಬರಹಗಾರ್ತಿ ವಿದ್ಯಾ ವಿ. ಹಾಲಭಾವಿ, ವಿವಿಧ ವಿಷಯಗಳ ಬಗ್ಗೆ ಬರೆದ ಸುಮಾರು 8000ಕ್ಕೂ ಹೆಚ್ಚು ಪದಬಂಧಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗ್ರಿಡ್ಲರ್‌ ಪಜ಼ಲ್‌ ಹಾಗೂ ಸ್ಟ್ರಿಮೊ ಪಜ಼ಲ್‌ ಅನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜಾಣ ಜಾಣೆಯರಿಗಾಗಿ ಇದೋ ಪದಬಂಧ (ಭಾಗ 1,2), ಬಿಡಿಸಿದರೆ ಪದ ಸುಡೊಕು, ಮೆದುಳು ಚುರುಕು ಇವರ ಪ್ರಮುಖ ಕೃತಿಗಳು. ಇವರಿಗೆ ಆದರ್ಶ ಮಹಿಳೆ ಪುರಸ್ಕಾರ, ರಾಜಾಜಿನಗರ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಹೂ ಗೊಂಚಲು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ಸಂದಿವೆ.

ವಿದ್ಯಾ ವಿ. ಹಾಲಭಾವಿ