ಬಿಡಿಸಿದರೆ ಪದ ಸುಡುಕು ಮೆದುಳು ಚುರುಕು

Author : ವಿದ್ಯಾ ವಿ. ಹಾಲಭಾವಿ

Pages 208

₹ 140.00




Year of Publication: 2017
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಬುದ್ಧಿಗೆ ಕಸರತ್ತನ್ನು ನೀಡುವ, ಖಾಲಿ ಚೌಕಗಳಲ್ಲಿ ಅಕ್ಷರಗಳನ್ನು ಬರೆಯುವ ಪದಗಳ ಆಟವೇ ಪದ ಸುಡೊಕು. ಸರಳತೆಯೇ ಇದರ ವೈಶಿಷ್ಠ. ತರ್ಕಶಾಸ್ತ್ರದ ಗಂಧಗಾಳಿ ಗೊತ್ತಿಲ್ಲದ ಸಾಮಾನ್ಯರನ್ನೂ ತರ್ಕಿಸುವಂತೆ ಮಾಡುವ ಶಕ್ತಿ ಇದಕ್ಕಿದೆ. ಹೆಚ್ಚಿನ ಪದ ಭಂಡಾರವಿರದವರೂ ಕೂಡ ಪದ ಸುಡೊಕುವನ್ನು ಬಿಡಿಸಬಹುದು. ಗ್ರಹಣಶಕ್ತಿ ಹಾಗೂ ಅಪಾರ ತಾಳ್ಮೆ ಇರುವ ಯಾರು ಬೇಕಾದರೂ ಈ ಪದ ಸುಡೊಕು ಆಡಬಹುದು. ಸುಡೊಕು ಬಿಡಿಸುವುದು ಹೇಗೆ, ಅದರ ರಚನೆ ಹೇಗಿರುತ್ತದೆ ಎಂಬುದನ್ನು’ಬಿಡಿಸಿದರೆ ಪದ ಸುಡುಕು ಮೆದುಳು ಚುರುಕು’ ಕೃತಿಯು ವಿವರಿಸುತ್ತದೆ.

About the Author

ವಿದ್ಯಾ ವಿ. ಹಾಲಭಾವಿ

ಬೆಂಗಳೂರಿನಲ್ಲಿ ನೆಲೆಸಿರುವ ಪದ ಸುಡೊಕು ಬರಹಗಾರ್ತಿ ವಿದ್ಯಾ ವಿ. ಹಾಲಭಾವಿ, ವಿವಿಧ ವಿಷಯಗಳ ಬಗ್ಗೆ ಬರೆದ ಸುಮಾರು 8000ಕ್ಕೂ ಹೆಚ್ಚು ಪದಬಂಧಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗ್ರಿಡ್ಲರ್‌ ಪಜ಼ಲ್‌ ಹಾಗೂ ಸ್ಟ್ರಿಮೊ ಪಜ಼ಲ್‌ ಅನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜಾಣ ಜಾಣೆಯರಿಗಾಗಿ ಇದೋ ಪದಬಂಧ (ಭಾಗ 1,2), ಬಿಡಿಸಿದರೆ ಪದ ಸುಡೊಕು, ಮೆದುಳು ಚುರುಕು ಇವರ ಪ್ರಮುಖ ಕೃತಿಗಳು. ಇವರಿಗೆ ಆದರ್ಶ ಮಹಿಳೆ ಪುರಸ್ಕಾರ, ರಾಜಾಜಿನಗರ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಹೂ ಗೊಂಚಲು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ಸಂದಿವೆ. ...

READ MORE

Related Books