ಕ್ಲಿಕ್

Author : ಡಿ.ಜಿ. ಮಲ್ಲಿಕಾರ್ಜುನ

Pages 190

₹ 450.00




Year of Publication: 2011
Published by: ಡಾ.ಎಂ.ಬೈರೇಗೌಡ, ಪ್ರಗತಿ ಗ್ರಾಫಿಕ್ಸ್,
Address: 119, 3 ನೇ ತಿರುವು, 8 ನೇ ಮುಖ್ಯ ರಸ್ತೆ, ಹಂಪಿನಗರ, ಬೆಂಗಳೂರು -104
Phone: 7899906116

Synopsys

ಕ್ಯಾಮರಾ ಕ್ಲಿಕ್ಕಿಸುವುದೂ ಸಹ ಲೇಖಕ ಡಿ.ಜಿ. ಮಲ್ಲಿಕಾರ್ಜುನ ಅವರ ಹವ್ಯಾಸ. ಬೆಳಕು ಬಿಂಬಕ್ಕೆ ಕ್ಯಾಮೆರಾ ಹಿಡಿದು ಬಿಂಬ ಗ್ರಹಣ ಮಾಡುವುದರ ಜೊತೆಗೆ ಅದರಲ್ಲಿ ನೋಟವನ್ನು ಅರಳಿಸಿದ್ದಾರೆ. ಈ ಕಲೆಯ ವಿವರವೇ ಈ ಕೃತಿ-ಕ್ಲಿಕ್.

ಚಿತ್ರಕ್ಕೆ ಬರಹ ಕೊಡುವ ಕನ್ನಡದ "ಫೋಟೋ ಸಾಹಿತಿ"ಗಳ ಮುಂದುವರೆದ ಕೊಂಡಿಯಾಗಿರುವ ಲೇಖಕರು, ಚಿತ್ರಗಳಲ್ಲಿ ಕೆಲವಕ್ಕೆ ವಿವರಣೆ, ಹಲವಕ್ಕೆ ಮಾಹಿತಿ, ಮತ್ತಿಷ್ಟಕ್ಕೆ ಭಾವನುಡಿ, ಮಗದಷ್ಟಕ್ಕೆ ನೆನಪಿನ ನುಡಿ ತಂದಿದ್ದಾರೆ. ಅವು ಸರಳ, ಲವಲವಿಕೆಯಿಂದ ಕೂಡಿವೆ. ಮಕ್ಕಳೂ, ಹಿರಿಯರೂ ಆಸಕ್ತಿಯಿಂದ ಓದಬಹುದು, ಅರಿಯಬಹುದು, ಇನ್ನೊಬ್ಬರಿಗೆ ಹೇಳಬಹುದಾದಷ್ಟು ಕುತೂಹಲಕರ ಹಾಗೂ ಆಸಕ್ತಿ ಪ್ರೇರಕವಾಗಿವೆ. 

ಈ ಪುಸ್ತಕದಲ್ಲಿ ಯಾವುದೂ ಅಮುಖ್ಯವಲ್ಲ. ಆದರೂ ತೇಜಸ್ವಿ ಅವರನ್ನು ಕುರಿತ ವ್ಯಕ್ತಿಚಿತ್ರ ಭಾಗದಲ್ಲಿ ಅಪರೂಪದ ಚಿತ್ರಗಳನ್ನು ಮಲ್ಲಿಕಾರ್ಜುನ ತೆಗೆದುಕೊಟ್ಟಿದ್ದಾರೆ. 

About the Author

ಡಿ.ಜಿ. ಮಲ್ಲಿಕಾರ್ಜುನ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರು ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕನ್‌ ಹೆರಲ್ಡ್‌ ದಿನಪತ್ರಿಕೆಗೆ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು ಛಾಯಾಗ್ರಹಣದಲ್ಲಿ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ನಮ್ಮ ಶಿಡ್ಲಘಟ್ಟ, ಕ್ಲಿಕ್, ಭೂತಾನ್, ಅರೆಕ್ಷಣದ ಅದೃಷ್ಟ, ರಸ್ಕಿನ್ ಬಾಂಡ್ ಕತೆಗಳು, ಯೋರ್ಡಾನ್ ಪಿರೆಮಸ್- ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಯೋರ್ಡಾನ್ ಪಿರೆಮಸ್ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ...

READ MORE

Related Books