ಶಿಲ್ಪಕಲಾ ದೇಗುಲಗಳು

Author : ಪುಂಡಲೀಕ ಕಲ್ಲಿಗನೂರ

Pages 383

₹ 1400.00




Published by: ಕನ್ನಡ ಪ್ರಕಾಶನ

Synopsys

ಗಜೇಂದ್ರಗಡ ಹಾಗೂ ರೋಣ ತಾಲ್ಲೂಕುಗಳ ದೇವಸ್ಥಾನಗಳಲ್ಲಿನ ಶಿಲ್ಪಕಲೆಯ ಸೌಂದರ್ಯವನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಈ ಎರಡು ತಾಲ್ಲೂಕುಗಳನ್ನು ಸುತ್ತಾಡಿ, ಪುಂಡಲೀಕ ಅವರು ಶಿಲ್ಪಕಲೆಯ ಚಿತ್ರಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು, ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಸುಂದರವಾದ ಛಾಯಾಚಿತ್ರಗಳು, ಉತ್ತಮ ಗುಣಮಟ್ಟದ ಕಾಗದ, ಗುಣಮಟ್ಟದ ಮುದ್ರಣದ ಕಾರಣದಿಂದಾಗಿ ಈ ಪುಸ್ತಕ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿರುವವರ   ಮೆಚ್ಚುಗೆಗೆ ಪಾತ್ರವಾಗಿದೆ. ಛಾಯಚಿತ್ರದ ಜೊತೆಗೆ ಆಯಾ ದೇವಸ್ಥಾನದ ಮಹತ್ವ ಕುರಿತು  ವಿವರಗಳನ್ನು ಇಲ್ಲಿ ಒದಗಿಸಲಾಗಿದೆ. 

About the Author

ಪುಂಡಲೀಕ ಕಲ್ಲಿಗನೂರ

ರೇಖಾಚಿತ್ರ ಕಲಾವಿದ ಹಾಗೂ  ಸಾಹಿತಿ ಪುಂಡಲೀಕ ಕಲ್ಲಿಗನೂರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ತಂದೆ ವೀರಪ್ಪ, ತಾಯಿ ಮಲ್ಲಮ್ಮ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ರೇಖಾಚಿತ್ರಗಳು ಬೆಳಕು ಕಂಡಿವೆ. ಪುಸ್ತಕಗಳಿಗೆ ಮುಖಪುಟಗಳನ್ನು ರಚಿಸಿದ್ದಾರೆ. ಕೃತಿಗಳು: ಸಲಿಲಧಾರೆ, ಪ್ರೀತಿಮಳೆ (ಕವನ ಸಂಕಲನಗಳು), ದುರ್ಗಮ (ನಾಟಕ) ಕಾಡು ನಮ್ಮ ನಾಡು (ಮಕ್ಕಳ ನಾಟಕ) ಅರಿವೇ ಗುರು (ಪ್ರಬಂಧಗಳು) ಪ್ರಭಾತ್ ಸರ್ಕಸ್ (ಕಥಾಸಂಕಲನ) ಬೇಲೂರು ಹಳೇಬೀಡು – ಶಿಲ್ಪಕಲಾ ಸಾಮ್ರಾಜ್ಯ (ಪರಂಪರೆ ಕಳಕಳಿಯ ಲೇಖನಗಳು), "ಶಿಲ್ಪಕಲಾ ದೇಗುಲಗಳು" ಗ್ರಂಥಕ್ಕೆ  ಇತ್ತೀಚೆಗಷ್ಟೇ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಂಕೇಶ್ ಪತ್ರಿಕೆಯ ನೀಲು ಕವಿತೆಗಳಿಗೆ ಇವರದೇ ರೇಖಾ ಚಿತ್ರ ...

READ MORE

Related Books