ಬೇಲೂರು ಹಳೇಬೀಡು ಶಿಲ್ಪಕಲಾ ಸಾಮ್ರಾಜ್ಯ

Author : ಪುಂಡಲೀಕ ಕಲ್ಲಿಗನೂರ

Pages 406

₹ 1450.00




Year of Publication: 2016
Published by: ಕಿಕ್ಕೇರಿ ಪ್ರಕಾಶನ
Address: 1ನೇ ಮುಖ್ಯರಸ್ತೆ, ದೀಪಾಂಜಲಿ ನಗರ, ಬೆಂಗಳೂರು 560026
Phone: 9449800858

Synopsys

ಕಲಾವಿದ ಹಾಗೂ ಲೇಖಕ ಪುಂಡಲೀಕ ಕಲ್ಲಿಗನೂರು ಅವರ ಕೃತಿ,ʻಬೇಲೂರು ಹಳೇಬೀಡು ಶಿಲ್ಪಕಲಾ ಸಾಮ್ರಾಜ್ಯʼ. ಹಾಸನ ಜಿಲ್ಲೆಯ ಹೊಯ್ಸಳ ದೇವಾಲಯಗಳಾದ ಬೇಲೂರು–ಹಳೇಬೀಡಿನ ಶಿಲ್ಪಕಲೆಯನ್ನು ಕಲಾತ್ಮಕವಾಗಿ ಸೆರೆ ಹಿಡಿದು ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಛಾಯಾಗ್ರಾಹಕ ಪುಂಡಲೀಕ ಕಲ್ಲಿಗನೂರು, ತಮ್ಮ ಚಿತ್ರಗಳೂ ಸೇರಿದಂತೆ ಸಹ ಛಾಯಾಗ್ರಾಹಕರಾದ ದೀಪು ಬೇಲೂರು, ಮಹಾಲಿಂಗು, ಎಂ. ವಿಶ್ವನಾಥ್‌, ವಿಪಿನ್‌ ಬಾಳಿಗಾ ಅವರ ಚಿತ್ರಗಳನ್ನು ಇಟ್ಟುಕೊಂಡು ಈ ಸಂಪುಟವನ್ನು ಸಂಪಾದಿಸಿದ್ದಾರೆ. ಇವರೆಲ್ಲರ ಅಪಾರ ಶ್ರಮ ಇಲ್ಲಿ ಪ್ರತಿ ಪುಟಗಳಲ್ಲಿ ಕಾಣುತ್ತದೆ. ಜೊತೆಗೆ, ಆ ಶಿಲ್ಪಗಳ ಕುರಿತ ವಿವರಣೆಯೂ  ಸಂಪುಟದಲ್ಲಿದೆ. ಬೇಲೂರಿನ ಚೆನ್ನಕೇಶವ, ನಾಟ್ಯರಾಣಿ ಶಾಂತಲೆ, ರತಿ–ಮನ್ಮಥರು, ವಿಷ್ಣು ಶಿಲ್ಪಗಳು, ಶಿಲಾಬಾಲಿಕೆಯರ ಶಿಲ್ಪಗಳ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ಜೋಡಿ ದೇವಾಲಯಗಳು, ಅಲ್ಲಿನ ದೇವತೆಗಳು, ಮಿಥುನ ಶಿಲ್ಪಗಳು, ರಾಮಾಯಣ–ಮಹಾಭಾರತ ಕಥಾಪಟ್ಟಿಕೆ ಮತ್ತಿತರ ಚಿತ್ರಗಳನ್ನು ಕೃತಿಯಲ್ಲಿ ಕೊಡಲಾಗಿದೆ.

About the Author

ಪುಂಡಲೀಕ ಕಲ್ಲಿಗನೂರ

ರೇಖಾಚಿತ್ರ ಕಲಾವಿದ ಹಾಗೂ  ಸಾಹಿತಿ ಪುಂಡಲೀಕ ಕಲ್ಲಿಗನೂರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ತಂದೆ ವೀರಪ್ಪ, ತಾಯಿ ಮಲ್ಲಮ್ಮ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ರೇಖಾಚಿತ್ರಗಳು ಬೆಳಕು ಕಂಡಿವೆ. ಪುಸ್ತಕಗಳಿಗೆ ಮುಖಪುಟಗಳನ್ನು ರಚಿಸಿದ್ದಾರೆ. ಕೃತಿಗಳು: ಸಲಿಲಧಾರೆ, ಪ್ರೀತಿಮಳೆ (ಕವನ ಸಂಕಲನಗಳು), ದುರ್ಗಮ (ನಾಟಕ) ಕಾಡು ನಮ್ಮ ನಾಡು (ಮಕ್ಕಳ ನಾಟಕ) ಅರಿವೇ ಗುರು (ಪ್ರಬಂಧಗಳು) ಪ್ರಭಾತ್ ಸರ್ಕಸ್ (ಕಥಾಸಂಕಲನ) ಬೇಲೂರು ಹಳೇಬೀಡು – ಶಿಲ್ಪಕಲಾ ಸಾಮ್ರಾಜ್ಯ (ಪರಂಪರೆ ಕಳಕಳಿಯ ಲೇಖನಗಳು), "ಶಿಲ್ಪಕಲಾ ದೇಗುಲಗಳು" ಗ್ರಂಥಕ್ಕೆ  ಇತ್ತೀಚೆಗಷ್ಟೇ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಂಕೇಶ್ ಪತ್ರಿಕೆಯ ನೀಲು ಕವಿತೆಗಳಿಗೆ ಇವರದೇ ರೇಖಾ ಚಿತ್ರ ...

READ MORE

Related Books