ಗಂಟಿಚೋರ್ ಸಮುದಾಯ

Author : ಅರುಣ್ ಜೋಳದಕೂಡ್ಲಿಗಿ

Pages 320

₹ 120.00




Year of Publication: 2016
Published by: ಡಾ.ಬಿ.ಆರ್. ಅಂಬೇಡ್ಕರ್ ಸಂಸ್ಥೆ
Address: ನಿರ್ದೇಶಕರು,ಡಾ.ಬಿ.ಆರ್. ಅಂಬೇಡ್ಕರ್ ಸಂಸ್ಥೆ, ಬೆಂಗಳೂರು- 560 052
Phone: 9901445702

Synopsys

ಅರುಣ್ ಜೋಳದಕೂಡ್ಲಿಗಿ ಅವರ ಸಂಶೋಧನಾ ಕೃತಿ ‘ಗಂಟಿಚೋರ್ ಸಮುದಾಯ’. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಡಿಯಲ್ಲಿ ಪರಿಶಿಷ್ಟ ಜಾತಿ ವರ್ಗದ ಅಲೆಮಾರಿ, ಅರೆಅಲೆಮಾರ, ಸೂಕ್ಷ್ಮ ಮತ್ತುಅತಿಸೂಕ್ಷ್ಮ ಸಮುದಾಯಗಳ ಅಧ್ಯಯನದ ಪೈಕಿ ‘ಗಂಟಿಚೋರ್ ಸಮುದಾಯ’ ಅಧ್ಯಯನ ಬಹು ಮುಖ್ಯದ್ದಾಗಿದೆ. ಅಪರಾಧಿಬುಡಕಟ್ಟೆಂದು ಹಣೆಪಟ್ಟಿ ಹೊತ್ತಿರುವ ಈ ಸಮುದಾಯದ ಪ್ರಮುಖ ನೆಲೆಯ ಶೋಧವೇ ಈ ಅಧ್ಯಯನ ಕೃತಿ. ಉತ್ತರ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್‍ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದ್ದು, ಬಹುರೂಪದಲ್ಲಿ ಸಮಾನಾಂತರ ಹೆಸರಿನೊಂದಿಗೆ ನೆಲೆಸಿದೆ. ಇವರ ಬದುಕು, ದುಡಿಮೆ ಸೇರಿದಂತೆ ಸಂಪೂರ್ಣ ಚಿತ್ರಣ ಈ ಕೃತಿಯಿಂದ ಲಭ್ಯವಿದೆ.

About the Author

ಅರುಣ್ ಜೋಳದಕೂಡ್ಲಿಗಿ
(13 February 1980)

ಅರಣ್ ಜೋಳದಕೂಡ್ಲಿಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯ ಜಿ. ಹನುಮಂತಪ್ಪ, ಎಸ್. ನಾಗರತ್ನಮ್ಮ ಅವರ ಮಗನಾಗಿ 13.02.1980 ರಲ್ಲಿ ಜನಿಸಿದರು. ಕೂಡ್ಲಿಗಿ ತಾಲೂಕಿನ ಹಾರಕನಾಳು, ಉಜ್ಜಿನಿ, ಕೊಟ್ಟೂರಿನಲ್ಲಿ ಪದವಿವರೆಗಿನ ಶಿಕ್ಷಣ ಮುಗಿಸಿದ ಅವರು ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅರುಣ್ ಅವರ ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ...

READ MORE

Related Books