ಜಾನಪದ ಕಿರುಬರಹ ದಂಡೆ

Author : ಶಾಂತಿ ನಾಯಕ

Pages 90

₹ 90.00




Year of Publication: 2018
Published by: ಜಾನಪದ ಪ್ರಕಾಶನ
Address: ಹೊನ್ನಾವರ, ಉತ್ತರ ಕನ್ನಡ
Phone: 9482438577

Synopsys

ಜಾನಪದ ಒಂದು ಅಧ್ಯಯನ ಶಿಸ್ತಾಗಿ ರೂಪಗೊಂಡ ಮೇಲೆ ಅನೇಕ ಜಾನಪದ ಆಸಕ್ತರು ಕನ್ನಡದಲ್ಲಿ ಜಾನಪದ ಸಂಬಂಧೀ ಕೃತಿಗಳನ್ನು ರಚಿಸಿ, ಪ್ರಕಟಿಸಿರುವುದು ಸಂತಸದ ಸಂಗತಿ. ಜಾನಪದ ವಿಷಯಾಸಕ್ತಿ ಆರಂಭಿಕ ದಶಕಗಳಿಗಿಂತ ಇಂದು ಹೆಚ್ಚಾಗಿದೆ. ಅದಕ್ಕೆ ಪ್ರಕಟಗೊಂಡ ಕೃತಿಗಳ ಶೀರ್ಷಿಕೆ ಹಾಗೂ ಆಯ್ದುಕೊಂಡ ವಿಷಯಗಳೇ ಸಾಕ್ಷಿ ಒದಗಿಸಿದೆ. ಜಾನಪದವನ್ನು ಒಂದು ಅಧ್ಯಯನ ಶಿಸ್ತನ್ನಾಗಿ ರೂಪಿಸಲು ಹಾ.ಮಾ. ನಾಯಕ, ದೇಜೇಗೌ, ಜೀಶಂಪ ಇನ್ನೂ ಮುಂತಾದವರ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ಕೃತಿಯ ಲೇಖಕಿಯಾದ ಶ್ರೀಮತಿ ಶಾಂತಿ ನಾಯಕ ಅವರಿಗೆ ಜಾನಪದ ಕ್ಷೇತ್ರದ ಪೂರ್ವಸೂರಿಗಳ ಬರಹ ಹಾಗೂ ಜೀವನ ಕ್ರಮಗಳ ಅರಿವಿದೆ. ಲಿಖಿತ ಮಾಹಿತಿಯ ಬೆಳಕು ಹಾಗೂ ಕ್ಷೇತ್ರಾಧಾರಿತ ಮಾಹಿತಿಗಳ ಸಮಪಾತಳಿಯಲ್ಲಿ ಮೂಡಿ ಬಂದು ಈ ಕೃಷಿ ಉತ್ತರ ಕನ್ನಡದ ಸಾಂಸ್ಕೃತಿಕ ಒಳಬದುಕನ್ನು ಪ್ರತಿಫಲಿಸಿದೆ ಎಂದು ಪ್ರೊ. ಸ.ಚಿ.ರಮೇಶ್‌ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಶಾಂತಿ ನಾಯಕ
(27 March 1943)

ಲೇಖಕಿ ಶಾಂತಿ ನಾಯಕ ಅವರು ಎಂ.ಎ., ಬಿ.ಇಡಿ ಪದವೀಧರರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾಗಿ ನಿವೃತ್ತರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ 27-03-1943ರಲ್ಲಿ ಜನಿಸಿದರು. ತಂದೆ  ನಾರಾಯಣ ವೆಂಕಣ್ಣ ಕಲಗುಜ್ಞೆ,ತಾಯಿ- ದೇವಮ್ಮ ನಾರಾಯಣ ಕಲಗುಜ್ಜಿ. ಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು-(1979), ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು-(1982), ಜಾಣೆ ಕನ್ನಡವ ತಿಳಿದ್ದೇಳೆ -(1982), ಕಾಕಕ್ಕ ಗುಬ್ಬಕ್ಕ-(1985), ಜನಪದ ವೈದ್ಯಕೀಯ ಅಡುಗೆಗಳು-(1986), ರಂಗೋಲಿ-(1994),  ಕುಡಿತ ನಿಮಗೆಷ್ಟು ಹಿತ -(1995),  ಸಿಂಕೋನಾ-(1998), ಹವ್ಯಕರ ಅಡುಗೆಗಳು-(2003),  ಜನಪದ ಆಹಾರ ಪಾನೀಯಗಳು-(2004)., (ಸ್ಮರಣ ಸಂಚಿಕೆ) ಚಿನ್ನದ ಚೆನ್ನ -(2001), ಆಸರ -(2012),  ಸಜ್ಜನ -2003, ಉತ್ತರ ಕನ್ನಡ ಜಿಲ್ಲೆಯ ಸಣ್ಣಕತೆಗಳು (ಸಂ), ಜೀವ ಉಳಿಸುವ ...

READ MORE

Related Books