ಹಾಸನ ಜಿಲ್ಲೆಯ ಕಲಾವಿದರು

Author : ಹಂಪನಹಳ್ಳಿ ತಿಮ್ಮೇಗೌಡ

Pages 172

₹ 60.00




Year of Publication: 2019
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು

Synopsys

‘ಹಾಸನ ಜಿಲ್ಲೆಯ ಕಲಾವಿದರು’ ಕೃತಿಯು ಹಂಪನಹಳ್ಳಿ ತಿಮ್ಮೇಗೌಡ ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಸಾಂಸ್ಕೃತಿಕ ರಾಯಭಾರಿಗಳು, ಸಮಾಜಕ್ಕೆ ಗುರುವಾಗಿ ಶತಮಾನಗಳನ್ನು ಕಂಡವರು; ಕಾಣಿಸಿದವರು. ಅಕ್ಷರದ ಅರಿವಿಲ್ಲದಿದ್ದರೂ ವಿಶ್ವವಿದ್ಯಾನಿಲಯದಲ್ಲಿ ಕಲಿತವರಿಗಿಂತ ಹೆಚ್ಚು ಸಮರ್ಪಕವಾಗಿ ಸಾಂಸ್ಕೃತಿಕ ಜ್ಞಾನ ಸಂಪತ್ತನ್ನು ಹೊಂದಿದ್ದು ಅದನ್ನು ಪ್ರಸಾರ ಮಾಡಿದ ಅಭಿಜ್ಞರ ಕುರಿತು ಈ ಕೃತಿ ಮಾತನಾಡುತ್ತದೆ. ಹಾಸನ ನಗರದ ಸೈಯದ್‌ ಇಸಾಕ್‌ ತಂದೆ ಸೈಯದ್‌ ಇಮಾಮ್‌ ತಾಯಿ ಫಾತಿಮಾ. ಇವರು ಈಗಿಲ್ಲ. ಈಗ ಬದುಕಿದ್ದರೆ ಇವರಿಗೆ ಸುಮಾರು ನೂರಹತ್ತು ವರ್ಷಗಳಷ್ಟಾಗುತ್ತಿತ್ತು. ಇವರು ಯಕ್ಷಗಾನ ಮೇಳಗಳನ್ನು ಕಲಿಸುವುದರೊಂದಿಗೆ ವೇಷವನ್ನು ಕೂಡ ಹಾಕಿದವರು. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕಲೆಗೆ ಮನಸೋತವರು ಎನ್ನುವ ವಿಚಾರವನ್ನು ಇಲ್ಲಿ ತಿಳಿಸಲಾಗಿದೆ.

About the Author

ಹಂಪನಹಳ್ಳಿ ತಿಮ್ಮೇಗೌಡ

ಲೇಖಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಂಪನಹಳ್ಳಿಯವರು ಅಧ್ಯಾಪನ, ಜಾನಪದ ಅಧ್ಯಯನ, ಸಂಘಟನೆ ಮತ್ತು ಸಂವರ್ಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಬರಹಗಳಿಗೆ ಗಟ್ಟಿನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯ ಭದ್ರತೆಗೆ ಮೊದಲು ಗುರುತಿಸಿಕೊಂಡಿರುವುದು ಸತ್ವಶಾಲಿಯಾದ ಜನಪದ ಭೂಮಿ ಹಾಸನದೊಳಗೆ ಇರುತ್ತ ಅದನ್ನೊಂದು ಸಾಂಸ್ಕೃತಿಕ ಅನನ್ಯತೆಯಾಗಿ ನೋಡುವ ಮೂಲಕ ಅದರೊಳಗೆ ಅಡಗಿರುವ ಎಲ್ಲಾ ಜೀವನ ಶ್ರದ್ದೆಗಳನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಟುಕಾಟಕ್ಕೆ ಮೌಲಿಕತೆ ಇದೆ. ...

READ MORE

Related Books