ಚಿತ್ರದುರ್ಗ ಜಿಲ್ಲೆಯ ಜನಪದ ಕಲಾವಿದರು

Author : ಯಣ್ಣೆಕಟ್ಟೆ ಚಿಕ್ಕಣ್ಣ

Pages 150

₹ 60.00




Year of Publication: 2019
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು

Synopsys

‘ಚಿತ್ರದುರ್ಗ ಜಿಲ್ಲೆಯ ಜನಪದ ಕಲಾವಿದರು’ ಕೃತಿಯು ಯಣ್ಣೆಕಟ್ಟೆ ಚಿಕ್ಕಣ್ಣ ಅವರ ವ್ಯಕ್ತಿಚಿತ್ರಣ ಕುರಿತ ಸಂಕಲನವಾಗಿದೆ. ಇಲ್ಲಿ ಭಿನ್ನ ಭಿನ್ನ ವ್ಯಕ್ತಿತ್ವಗಳ, ಕಲೆಗಳ ಪರಿಚಯವನ್ನು ಮಾಡಲಾಗಿದೆ. ಅವರ ಸಾಧನೆ ಹಾಗೂ ಅವರು ಬದುಕಿದ ರೀತಿಯನ್ನು ತಿಳಿಸಲಾಗಿದೆ. ಇನ್ನು ಇಲ್ಲಿ ತೋಪಮ್ಮ ಎನ್ನುವ ಚಿತ್ರದುರ್ಗ ಜಿಲ್ಲೆಯ ಜನಪ್ರಿಯ ಹಾಡುಗಾರ್ತಿ ಕುರಿತ ವಿಚಾರಗಳನ್ನು ಕಾಣಬಹುದು. ಇವರು ಕಾಡುಗೊಲ್ಲರ ಸಮಗ್ರ ಸಂಸ್ಕೃತಿಯನ್ನು ಹಾಡುಗಳ ಮೂಲಕ ವಿದ್ವಾಂಸ ವಲಯಕ್ಕೆ ತೆರೆದಿಟ್ಟ ಮೊದಲ ಹಾಡುಗಾರ್ತಿ. 1930ರಲ್ಲಿ ಹುಟ್ಟಿದ ಈಕೆಯದು ಹಿರಿಯೂರು ತಾಲ್ಲೂಕಿನ ಬಿದರಕೆರೆ ಗ್ರಾಮ. ಅನಕ್ಷರಸ್ತೆಯಾದರೂ ಈಕೆಯ ಕಲ್ಪನೆ, ನೆನಪಿನ ಶಕ್ತಿ ಅಗಾಧವಾದುದು ಎನ್ನುತ್ತದೆ ಈ ಕೃತಿ.

About the Author

ಯಣ್ಣೆಕಟ್ಟೆ ಚಿಕ್ಕಣ್ಣ

ಡಾ. ಯಣ್ಣೆಕಟ್ಟೆ ಚಿಕ್ಕಣ್ಣ ಜಾನಪದ ಮತ್ತು ಮಾನವ ಶಾಸ್ತ್ರೀಯ ಅಧ್ಯಯನದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು ಪ್ರಸ್ತುತ ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಬುಡಕಟ್ಟು ಸಂಸ್ಕೃತಿ ಅಧ್ಯಯನಕ್ಕೆ ಇವರ ಕೊಡುಗೆ ಅನನ್ಯವಾದುದು. - ವೀರಜುಂಜಪ್ಪ ಸಮಗ್ರ ಕಥಾವಳಿ, ಚಿತ್ರದೇವರ ಕಾವ್ಯ ಈ ಮೊದಲಾದ ಮಹತ್ವದ ಬುಡಕಟ್ಟು ಕಾವ್ಯಗಳನ್ನು ಪ್ರಕಟಿಸಿದ್ದಾರೆ. ಗಡಿನಾಡ ಜಾನಪದ, ತುರುಗೋಳ್ ಜಾನಪದ, ಜಾನಪದ ಸಂಪನ್ನರು, ತುಮಕೂರು ಜಿಲ್ಲೆ ಜಾನಪದೀಯ ನೆಲೆಗಳು ಇವರ ಪ್ರಮುಖ ಸಂಶೋಧನಾ ಕೃತಿಗಳು. 'ಹಿಮ ತಬ್ಬಿದ ನೇಪಾಳ ಕೃತಿಯೂ ಸೇರಿದಂತೆ 'ಬಂಡಿ ...

READ MORE

Related Books