ಕನ್ನಡ ಜಗತ್ತು

Author : ವಸಂತ ಶೆಟ್ಟಿ

Pages 188

₹ 150.00




Year of Publication: 2022
Published by: ಹರಿವು ಬುಕ್ಸ್

Synopsys

ಜಾಗತೀಕರಣ, ತಂತ್ರಜ್ಞಾನದ ಬದಲಾವಣೆ, ಕಳೆದ ನೂರು ವರ್ಷಗಳ ಜಿಯೋ ಪಾಲಿಟಿಕಲ್ ಪಲ್ಲಟಗಳ ನಡುವೆ ಕನ್ನಡ ತನ್ನ ಇರುವಿಕೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಬಗ್ಗೆ ಪ್ರಪಂಚದ ಇತರೆ ನುಡಿಸಮುದಾಯಗಳಿಂದ ಕಲಿಯುವುದು ಸಾಕಷ್ಟಿದೆ. ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಕನ್ನಡದ ಮುಂದೆ ಎದುರಾಗಿರುವ ಸವಾಲುಗಳ ಸ್ವರೂಪ ಕಳೆದ ಎರಡು ಸಾವಿರ ವರ್ಷದಲ್ಲಿ ಕಂಡ ಸವಾಲುಗಳಿಗಿಂತ ಬಹಳ ಬೇರೆಯೇ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಯೋಚನೆ ಮಾಡುತ್ತಿರುವ ರೀತಿಯೂ ಬದಲಾಗಬೇಕಿದೆ. ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಉದಯವಾಣಿ ಪತ್ರಿಕೆಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಕನ್ನಡದ ಯುವ ಬರಹಗಾರ ವಸಂತ ಶೆಟ್ಟಿಯವರ “ಕನ್ನಡ ಜಗತ್ತು” ಅಂಕಣ ಮಾಡಿತ್ತು. ಆಯ್ದ ಅಂಕಣ ಬರಹಗಳ ಸಂಕಲನ ಈ ಪುಸ್ತಕ.

About the Author

ವಸಂತ ಶೆಟ್ಟಿ

ಕುಂದಾಪುರದ ಕನ್ನಡಿಗ ವಸಂತ ಶೆಟ್ಟಿ ಧಾರವಾಡದ ಕಲಘಟಗಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಕಳೆದ ಎರಡು ದಶಕಗಳಿಂದ ಬೆಂಗಳೂರು ನಿವಾಸಿ ಆಗಿದ್ದರು. ಉದಯವಾಣಿಯಲ್ಲಿ ಅಂಕಣ ಬರೆಯುವ ಅವರು ಕನ್ನಡ ಮತ್ತು ಕನ್ನಡ ನಾಡಿನ ಸಮಸ್ಯೆಗಳ ಬಗ್ಗೆ ಬರೆಯುತ್ತಾರೆ. ಬನವಾಸಿ ಬಳಗ, ಮುನ್ನೋಟ ಪುಸ್ತಕ ಮಳಿಗೆ ಅವರದು. ತಂತ್ರಜ್ಞಾನ ಮತ್ತು ಕನ್ನಡಕ್ಕೆ ಸಂಬಂಧಿಸಿದಂತೆ ವಿಶೇಷ ಕೆಲಸ ಮಾಡುತ್ತಿದ್ದಾರೆ.  ಕರ್ನಾಟಕವೊಂದೇ ಇವರು ರಚಿಸಿದ ಕೃತಿಯಾಗಿದೆ.  ...

READ MORE

Related Books