ಸುರಂಗದ ಕತ್ತಲೆ

Author : ಪದ್ಮರಾಜ ದಂಡಾವತಿ

Pages 368

₹ 300.00




Year of Publication: 2018
Published by: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ
Address: ಹಂಪಿ ವಿದ್ಯಾರಣ್ಯ - 583 276, ಹೊಸಪೇಟೆ(ತಾಲ್ಲೂಕು), ಬಳ್ಳಾರಿ (ಜಿಲ್ಲೆ) ಪ್ರಾದೇಶಿಕ ಕಚೇರಿ ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ನಂ. 1, ಹಳೆಯ ಕಾನೂನು ಕಾಲೇಜು ಕಟ್ಟಡ ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ ಬೆಂಗಳೂರು- 560009
Phone: 9449262647/080-22372388

Synopsys

‘ಸುರಂಗದ ಕತ್ತಲೆ’ ಕೃತಿಯು ಪದ್ಮರಾಜ ದಂಡಾವತಿ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣಗಳು ಇದಾಗಿದ್ದು, ಐದು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಸಮಾಜ, ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಶಿಕ್ಷಣದ ಕುರಿತ ವಿಚಾರಗಳನ್ನು ಇಲ್ಲಿ ಕಾಣಬಹುದು. ಪತ್ರಕರ್ತನಲ್ಲಿರುವ ಖಚಿತ ನಿಲುವು ಪುಸ್ತಕದ ಬರಹಗಳಲ್ಲಿ ಕಾಣುವ ಗುಣ. ಓದುಗನ ಮೇಲೆ ವಿಚಾರ 'ಹೇರದ', ವಿಷಯ 'ಹೇಳುವ' ವಿನ್ಯಾಸದಲ್ಲಿವೆ ಇಲ್ಲಿನ ಬರವಣಿಗೆಗಳು. ಇದನ್ನು ವಿಶೇಷವಾಗಿ, ರಾಜಕೀಯ ಸಂಸ್ಕೃತಿಯ ಆಸಕ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮಗಾಗೇ ಬರೆದ ಕೃತಿಯೆಂಬಂತೆ ಓದಿಕೊಳ್ಳಬಹುದು.

About the Author

ಪದ್ಮರಾಜ ದಂಡಾವತಿ
(30 August 1955)

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು.  ಕೃತಿಗಳು:  ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...

READ MORE

Related Books