'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಎನ್ನುವುದು ಇಲ್ಲಿ ಕೇವಲ ಮುಖಮಟದ ಸೂಟುಧಾರಿಗಷ್ಟೇ ಅಲ್ಲ, ಕಥಾನಾಯಕಿಯರಿಗೂ ಒಪ್ಪುವ ಮಾತು? ಬೆಕ್ಕಿಗೆ ಒಂಬತ್ತು ಜೀವಗಳಂತೆ! ಬೆಕ್ಕು is a survivor!'. ಎನ್ನುತ್ತಾರೆ ಪತ್ರಕರ್ತೆ, ಲೇಖಕಿ ಸಂಧ್ಯಾರಾಣಿ. ಅವರು ಕವಿ, ಲೇಖಕಿ ಪ್ರತಿಭಾ ನಂದಕುಮಾರ್ ಅವರ 'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಕೃತಿಗೆ ಬರೆದ ಬೆನ್ನುಡಿ ಹೀಗಿದೆ....
'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಇದು ಪ್ರತಿಭಾ ನಂದಕುಮಾರ್ ಅವರ ಎರಡನೆಯ ಕಥಾಸಂಕಲನ. ಒಂದು ಹುಚ್ಚಿನಂತೆ, ತಪಸ್ಸಿನಂತೆ, ಏರುತ್ತಲೇ ಇರುವ ಜ್ವರದಂತೆ ಅತ್ಯಂತ ತೀವ್ರಭಾವದ ಕವಿತೆಗಳನ್ನು ಬರೆಯುವ ಪ್ರತಿಭಾ ಅವರು ಎರಡನೆಯ ಕಥಾಸಂಕಲನಕ್ಕೆ ಇಷ್ಟು ಸಮಯ ಏಕೆ ತೆಗೆದುಕೊಂಡರೋ ಗೊತ್ತಿಲ್ಲ.
ಅವರ ಕವಿತೆಗಳು ಜಳಜಳನ ಉರಿಯುವ ಸುರುಸುರು ಬತ್ತಿ ಕಡ್ಡಿಯ ಬೆಳಕಲ್ಲಿ, ಜಗವನ್ನು, ಅವರ ಒಳಜಗತ್ತನ್ನೂ 'ಕಾಣಿಸು'ವಂಥವು. ಇಲ್ಲಿರುವ ಹದಿನೈದು ಕಥೆಗಳೂ ಸಹ ಅವರ ಕವಿತೆಗಳ ವಿಸ್ತರಣೆಯೇ ಆಗಿವೆ. ಅಂದರೆ ಇವೆಲ್ಲವೂ ಪ್ರತಿಭಾರ ಅತ್ಯಂತ ಖಾಸಗಿ ಜಗತ್ತಿಗೆ ಸೇರಿದವುಗಳೇನೋ ಎನ್ನಿಸುವಷ್ಟು ತೀವ್ರ ಸೂಕ್ಷ್ಮ ಸಂವೇದನೆಗಳನ್ನು ಹಿಡಿದಿಟ್ಟಿವೆ. ಮೇಲುನೋಟಕ್ಕೆ ಇವೆಲ್ಲವನ್ನೂ ನಗರ ಪ್ರಜ್ಞೆಯ ಕಥೆಗಳು ಎಂದು ಹೇಳಬಹುದಾದರೂ ಇವು ಅದಷ್ಟೇ ಅಲ್ಲ. ನಗರಗಳು ಕೊಡುವ ಅನಾಮಿಕತೆ ಮತ್ತು ಅನಾಥಪ್ರಜ್ಞೆಯಲ್ಲಿ ಹೆಣ್ಣೂಬ್ಬಳು ಹೇಗೆ ನಲುಗುತ್ತಾಳೆ, ಹೋರಾಡುತ್ತಾಳೆ, ಖುಷಿಯನ್ನು ಕಿತ್ತುಕೊಳ್ಳುತ್ತಾಳೆ ಮತ್ತು ಎಲ್ಲದರ ನಡುವೆಯೂ. ಎಲ್ಲದರ ನಂತರವೂ ಬತ್ತದ, ಸೋಲೊಪ್ಪದ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಆದ್ರ್ರತೆ ಕಳೆದುಕೊಳ್ಳದ ಹೆಣ್ಣು 'ಇಲ್ಲಿ ಮತ್ತೆ ಮತ್ತೆ ನಮಗೆ ಎದುರಾಗುತ್ತಾಳೆ. ಆ ಮಟ್ಟಿಗೆ 'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಎನ್ನುವುದು ಇಲ್ಲಿ ಕೇವಲ ಮುಖಮಟದ ಸೂಟುಧಾರಿಗಷ್ಟೇ ಅಲ್ಲ, ಕಥಾನಾಯಕಿಯರಿಗೂ ಒಪ್ಪುವ ಮಾತು? ಬೆಕ್ಕಿಗೆ ಒಂಬತ್ತು ಜೀವಗಳಂತೆ! ಬೆಕ್ಕು is a survivor!
ಕಥೆಯ ದೃಷ್ಟಿಯಿಂದ ಓದುಗರು ಮತ್ತು ತಂತ್ರದ ದೃಷ್ಟಿಯಿಂದ ಬರಹಗಾರರು ಸಹ ಓದಬೇಕಾದ ಪುಸ್ತಕ ಇದು. ಈ ಕಥೆಗಳ ಚಿತ್ರಕಶಕ್ತಿ ಅನನ್ಯವಾದದ್ದು, ಅದು ಕಥೆಗಳನ್ನು ನೇರವಾಗಿ ಮನದಂಗಳಕ್ಕೆ ತಂದು ನಿಲ್ಲಿಸುತ್ತದೆ. ಈ ಕಥೆಗಳು ನಿಮ್ಮನ್ನೂ ಕಾಡಲಿ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.